VISHVANATHA PATIL 
ಜಿಲ್ಲೆ

ಪ್ರಸಕ್ತ ಸಾಲಿನಲ್ಲಿ ಆರ್‌ಡಿಸಿಸಿ ಬ್ಯಾಂಕ್ ೧೨.೧೧ ಕೋಟಿ ಲಾಭ-ವಿಶ್ವನಾಥ ಪಾಟೀಲ್

 ರಾಯಚೂರು ೧೦೬ ವರ್ಷಗಳ ಇತಿಹಾಸ ಹೊಂದಿರು ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ೧೨.೧೧ ಕೋಟಿ ಲಾಭ ಗಳಿಸುವ ಮೂಲಕ ರೈತರಿಗೆ, ಸದಸ್ಯರಿಗೆ ಸಾಲ ಸೌಲಭ್ಯ ಒದಗಿಸುವಲ್ಲಿ ಮುಂದಾಗಿದೆAದು ಬ್ಯಾಂಕ್‌ನ ಅಧ್ಯಕ್ಷ ವಿಶ್ವನಾಥ ಪಾಟೀಲ್ ತೋರಣದಿನ್ನಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬ್ಯಾಂಕ್‌ನಿAದ ಕಳೆದ ಸುಮಾರು ವರ್ಷಗಳಿಂದ ಆದಾಯ ಹೆಚ್ಚಳ ಮಾಡಲಾಗುತ್ತಿದ್ದು, ೨೦೨೪ ಸಾಲಿನಲ್ಲಿ ೫೦.೪೮ ಕೋಟಿ ಷೇರು ಬಂಡವಾಳ ,೨೦೨೫ ಸಾಲಿನಲ್ಲಿ ೫೧.೫೨ ಕೋಟಿ ಹೆಚ್ಚಿಸಿದೆ. ೨೦೨೪ ಸಾಲಿನಲ್ಲಿ ೯೩.೭೩ ರಷ್ಟಿದ್ದ ನಿಽಗಳು ೨೦೨೫ ಸಾಲಿನಲ್ಲಿ ೧೦೪.೪೯ ಹೆಚ್ಚಿಸಿದೆ. ೧೪೪ .೨೧ ಕೋಟಿ ರೂ.ಗಳಿದ್ದ ಸ್ವಂತ ಬಂಡವಾಳ ೨೦೨೫ ಸಾಲಿನ ಅಂತ್ಯಕ್ಕೆ ೧೫೬.೦೧ ಕೋಟಿ ಏರಿಸಿದೆ.

ಪಡೆದ ಸಾಲದಲ್ಲಿ ಇಳಿಕೆಯಾದರೆ ಠೇವಣಿ ಸಂಗ್ರಹದಲ್ಲಿ ಪ್ರಮಾಣ ಹೆಚ್ಚಿಸಿಕೊಂಡಿದೆ. ಎನ್‌ಪಿಎದಲ್ಲಿಯೂ ೧೦.೫೮ ಕೋಟಿ ಅನುತ್ಪಾದಕ ಅವಕಾಶ ನೀಡಿದೆ. ಸಾಲ ವಸೂಲಾತಿಯಲಿ ಶೇ. ೯೪.೪೮ ರಷ್ಟು ಪ್ರಗತಿ ಸಾಽಸಿದೆ. ೨೦೨೪ ರಿಂದ ರೈತರ ಮರಣೋತ್ತರ ನಿಽ ಯೋಜನೆ ಜಾರಿಗೊಳಿಸಿದೆ. ಬೆಳೆ ಸಾಲ ಪಡೆದ ರೈತ ಸಾವಿಗೀಡಾದರೆ ಅವರ ಖಾತೆಯಲ್ಲಿ ೫೦ ಸಾವಿರ ರೂ ಕಡಿತಗೊಳಿಸಲಾಗುವ ಯೋಜನೆಯಡಿ ೨೬೨ ಜನರು ಲಾಭ ಪಡೆದಿದ್ದಾರೆ ಎಂದರು.

೨೦೨೩-೨೪ ಸಾಲಿನಲ್ಲಿ ಷೇರುದಾರರಿಗೆ ಶೇ.೯ ರಷ್ಟು ಡಿವಿಡೆಂಡು ಹಂಚಲಾಗಿದೆ. ರಾಜ್ಯದಲ್ಲಿಯೇ ಯುಪಿಎ ಆಪ್ ಸೇವೆ ಪ್ರಾರಂಭಿಸಿದ ಎರಡನೇ ಬ್ಯಾಂಕ್ ಆಗಿದೆ . ಬ್ಯಾಂಕಿನ ನಿರ್ದೇಶಕರುಗಳು ಹಾಗೂ ಸಿಬ್ಬಂದಿಗಳ ಸಹಕಾರದಿಂದ ಆರ್‌ಡಿಸಿಸಿ ಬ್ಯಾಂಕ್ ಪ್ರಗತಿಯ ಪಥದಲ್ಲಿ ಮುನ್ನಡೆದಿದೆ ಎಂದರು.

ಈ ಸಂದರ್ಭದಲ್ಲಿ ನಿರ್ದೇಶಕ ವಿಜಯಕುಮಾರ ಪಾಟೀಲ್, ಮುಖ್ಯ ಕಾರ್ಯನಿರ್ವಾಹಕ ಅಽಕಾರಿ ಎಂ.ಡಿ.ಪೂಜಾರ್ ಇದ್ದರು.