ಹರಪನಹಳ್ಳಿ ಗ್ರೇಡ್2 ತಹಸೀಲ್ದಾರ್ ನಟರಾಜ್ ಅವರಿಗೆ ಸಿಪಿಐಎಂಎಲ್ ಪಕ್ಷದಿಂದ ಮನವಿ ಸಲ್ಲಿಸಲಾಯಿತು. ಪದಾಧಿಕಾರಿಗಳಾದ ಸಂತೋಷ್ ಗುಳೇದಹಟ್ಟಿ, ಬಾಲಗಂಗಾಧರ್, ಹುಲಿಕಟ್ಟಿ ಮೈಲಪ್ಪ, ಇಬ್ರಾಹಿಂ ಸಾಬ್, ರಾಜಪ್ಪ, ಟಿ ಅಜ್ಜಪ್ಪ, ಮುಬಿನಾಬಿ, ಸಿಂಗ್ರಿಹಳ್ಳಿ ವೀರೇಶ, ಕೊಟ್ರಪ್ಪ, ಜೋಗಿನ ನಾಗರಾಜ, ತಿಮ್ಮಪ್ಪ, ಹಾರಕನಾಳು ಶಾರದಮ್ಮ, ರತ್ನಮ್ಮ, ಮಾಂತೇಶ, ಹ್ಯಾರಾಡ ಬಸವರಾಜಪ್ಪ, ಮಹೆಬೂಬ್ ಸಾಬ್, ರೆಹಮತ್ ಇತರರಿದ್ದರು. 
ಜಿಲ್ಲೆ

ಆರ್‌ಬಿಐ ಕಾಯ್ದೆ ಪ್ರಕಾರ ಬಡ್ಡಿ ದರ ನಿಗದಿ ಪಡಿಸಲಿ

ಹರಪನಹಳ್ಳಿ : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ದಿನೇ ದಿನೆ ಹೆಚ್ಚಾಗುತ್ತಿದ್ದು, ಅಮಾಯಕ ಬಡ ಜೀವಿಗಳು ಅಸುನೀಗುತ್ತಿದ್ದಾರೆ ಎಂದು ಸಿಪಿಐಎಂಎಲ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸಂದೇರ ಪರುಶುರಾಮ್ ಆರೋಪಿಸಿದರು.

ಪಟ್ಟಣದ ತಾಲೂಕು ಆಡಳಿತ ಭವನದ ಮುಂಭಾಗದಲ್ಲಿ ಸೋಮವಾರ ಸಿಪಿಐಎಂಎಲ್ ವತಿಯಿಂದ ಮೈಕ್ರೋ ಫೈನಾನ್ಸ್ ಹಾವಳಿ ಖಂಡಿಸಿ ಪ್ರತಿಭಟನೆ ನಡೆಸಿ ಗ್ರೇಡ್2 ತಹಸೀಲ್ದಾರ್ ನಟರಾಜ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ತಾಲೂಕಿನಲ್ಲಿಯೂ ಕೆಲ ಫೈನಾನ್ಸ್‌ಗಳ ಅಕ್ರಮ ಮೀಟರ್ ಬಡ್ಡಿ ದಂಧೆ ಮಿತಿಮೀರಿದೆ. ಫೈನಾನ್ಸ್ ಕಿರುಕುಳದಿಂದ ರಕ್ಷಣೆ ನೀಡಲು ಕೂಡಲೆ ಸಹಾಯವಾಣಿ ತೆರೆದು ಅಮಾಯಕರಿಗೆ ನ್ಯಾಯ ಒದಗಿಸಬೇಕು. ಎನ್‌ಆರ್‌ಎಲ್‌ಎಂ ಯೋಜನೆಯಿಂದ 10 ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಲಾತು. ಫೈನಾನ್ಸ್ ಕಿರುಕುಳಕ್ಕೆ ಕಡಿವಾಣ ಹಾಕಲು ಕಠಿಣ ನಿಲುವುಗಳನ್ನು ಸರ್ಕಾರ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಅಕ್ರಮ ಮೀಟರ್ ಬಡ್ಡಿ ದಂಧೆಕೋರರನ್ನು ಗಡಿಪಾರುಬೇಕು. ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಮೈಕ್ರೋ ಫೈನಾನ್ಸ್‌ಗಳ ವ್ಯವಸ್ಥಾಕರ ಸಭೆ ನಡೆಸಿ ಆರ್‌ಬಿಐ ಕಾಯ್ದೆ ಪ್ರಕಾರ ಬಡ್ಡಿ ದರ ನಿಗದಿ ಪಡಿಸಿ ಸಾಲ ನೀಡುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದರು.