ಮಂಗಳೂರು: ಕದ್ರಿ ನೃತ್ಯ ವಿದ್ಯಾನಿಲಯ ವಿದ್ಯಾರ್ಥಿನಿ ರೇಚಲ್ ರೋಸ್ ಅವರ ಭರತನಾಟ್ಯ ರಂಗಪ್ರವೇಶ ಸೆ.10 ರಂದು ಸಂಜೆ 4 ಗಂಟೆಗೆ ಮಂಗಳೂರು ಪುರಭವನದಲ್ಲಿ ಜರುಗಲಿದೆ.
ರೇಚಲ್ ರೋಸ್ ಅವರು ಸುಮಾರು 8 ವರ್ಷಗಳಿಂದ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ. ರಂಗಪ್ರವೇಶ ಪ್ರದರ್ಶನದಲ್ಲಿ ಭರತನಾಟ್ಯ ಪದ್ಧತಿಯ ಸಂಯೋಜನೆಯಾದ ಪುಷ್ಪಾಂಜಲಿ, ಜತಿಸ್ವರ, ಶಬ್ದಂ, ವರ್ಣಂ, ಅಷ್ಟಪದಿ, ಕೀರ್ತನೆ ಹಾಗೂ ತಿಲ್ಲಾನಗಳನ್ನು ಸುಮಾರು 3 ಗಂಟೆಗಳ ಕಾಲ ಪಂದನಲ್ಲೂರು ಪದ್ಧತಿಯಲ್ಲಿ ಪ್ರದರ್ಶನ ನೀಡಲಿದ್ದಾರೆ. ಗಾಯನದಲ್ಲಿ ವಿದುಷಿ ಉಷಾ ಪ್ರವೀಣ್, ಮೃದಂಗದಲ್ಲಿ ವಿದ್ವಾನ್ ಗೀತೇಶ್ ಎ.ಜಿ. ನೀಲೇಶ್ವರಂ, ಪಿಟೀಲಿನಲ್ಲಿ ವಿದ್ವಾನ್ ಶ್ರೀಧರ್ ಆಚಾರ್ ಪಾಡಿಗಾರ್ ಹಾಗೂ ಕೊಳಲಿನಲ್ಲಿ ವಿದ್ವಾನ್ ರಾಜಗೋಪಾಲ್ ವಿ.ಪಿ. ಅವರು ಸಹಕರಿಸಲಿದ್ದಾರೆ ಎಂದು ಕದ್ರಿ ನೃತ್ಯ ವಿದ್ಯಾಲಯದ ನಿರ್ದೇಶಕ ವಿದ್ವಾನ್ ಯು.ಕೆ.ಪ್ರವೀಣ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ
ಕಾರ್ಯಕ್ರಮದಲ್ಲಿ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಸಹಿತ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ. ರೇಚಲ್ ರೋಸ್ ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಅಭ್ಯಾಸಿಸುತ್ತಿದ್ದಾರೆ. ಉದ್ಯಮಿ ಸಿ.ಬಿ.ಥೋಮಸ್ ಮತ್ತು ರಶ್ಮಿ ಜೋಸ್ ದಂಪತಿ ಪುತ್ರಿ ಎಂದರು. ವಿದುಷಿ ಉಷಾ ಪ್ರವೀಣ್, ರೇಚಲ್ ರೋಸ್ ಅವರ ತಂದೆ ಸಿ.ಬಿ.ಥೋಮಸ್ ಉಪಸ್ಥಿತರಿದ್ದರು.