ಹುಬ್ಬಳ್ಳಿ: ಇಲ್ಲಿಯ ದೇಶಪಾಂಡೆನಗರದ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿರುವ ಶ್ರೀ ಕೃಷ್ಣ ದೇವರು ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳವರ ವೃಂದಾವನದಲ್ಲಿ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಆಶ್ರಯದಲ್ಲಿ ಆ. 20ರಿಂದ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಏರ್ಪಡಿಸಲಾಗಿದೆ.
ನಿತ್ಯ ಬೆಳಗ್ಗೆ 6ಕ್ಕೆ ಉಷಕಾಲ ಪೂಜೆ, ಅಷ್ಟೋತ್ತರ ಪಾರಾಯಣ, ಪಂಚಾಮೃತ, ಅಲಂಕಾರ ಪೂಜೆ, ಹಸ್ತೋದಕ, ಸಂಜೆ ಪಲ್ಲಕ್ಕಿ ಉತ್ಸವ, ತೊಟ್ಟಿಲೋತ್ಸವ, ಮಂತ್ರಾಕ್ಷತೆ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ.
ಆ. 20ರಂದು ಸಂಜೆ 5ಕ್ಕೆ ಪೂರ್ವಾರಾಧನೆ ಸಂಗೀತ ಕಾರ್ಯಕ್ರಮ, ಆ. 21ರಂದು ಮಧ್ಯಾರಾಧನೆ ಸಂಗೀತ ಸೇವೆ ಪಂ. ಶೇಷಗಿರಿದಾಸ ರಾಯಚೂರ ಅವರಿಂದ ನಡೆಯಲಿದೆ. ಆ. 22ರಂದು ಉತ್ತರಾರಾಧನೆ ಸಂಗೀತ ಸೇವೆಗಳು ಜರುಗಲಿವೆ.