ಜಿಲ್ಲೆ

ರಾಯರ ಆರಾಧನಾ ಮಹೋತ್ಸವ ಇಂದಿನಿಂದ, ಭವಾನಿನಗರದಲ್ಲಿ ವೈವಿಧ್ಯಮಯ ಕಾರ್ಯಕ್ರಮ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಭವಾನಿನಗರ ನಂಜನಗೂಡು ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀರಾಘವೇಂದ್ರಸ್ವಾಮಿಗಳ 353ನೇ ಆರಾಧನಾ ಪಂಚ ರಾತ್ರೋತ್ಸವವನ್ನು ಆ. 19ರಿಂದ 23ರ ವರೆಗೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ಆರಾಧನೆ ಅಂಗವಾಗಿ ಆ. 19ರಂದು ಬೆಳಗ್ಗೆ 7ಕ್ಕೆ ನಿತ್ಯ-ನೂತನೋಪಾಕರ್ಮ, ಸಂಜೆ 6ಕ್ಕೆ ಧ್ವಜಾರೋಹಣ ಹಾಗೂ ಸಹಸ್ರ ಮಹಿಳೆಯರು ಲಕ್ಷ್ಮೀ ಶೋಭಾನ ಮಾಡುವುದೊಂದಿಗೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಆ. 20ರಂದು ಪೂರ್ವರಾಧನೆ, 21ರಂದು ಮಧ್ಯಾರಾಧನೆ, 22ರಂದು ಉತ್ತರಾರಾಧನೆ ಜರುಗಲಿದೆ.

ನಿತ್ಯ ಬೆಳಗ್ಗೆ 6ಕ್ಕೆ ಸುಪ್ರಭಾತ, 7ಕ್ಕೆ ಪಂಚಾಮೃತ ಅಭಿಷೇಕ ಹಾಗೂ ಅಷ್ಟೋತ್ತರ ಪಾರಾಯಣ,10ಕ್ಕೆ ಅರ್ಚನೆ, ಕನಕಾಭಿಷೇಕ, ಮಧ್ಯಾಹ್ನ 12ಕ್ಕೆ ನೈವೇದ್ಯ, ಹಸ್ತೋದಕ, ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ, ಸಂಜೆ 6ಕ್ಕೆ ಭಜನೆ, ಉತ್ಸವ ಹಾಗೂ ಮಹಾಮಂಗಳಾರತಿ ನಡೆಯಲಿದೆ.

ಆ. 22ರಂದು ಬೆಳಗ್ಗೆ 10.35ಕ್ಕೆ ಭವಾನಿನಗರದ ರಾಜಬೀದಿಗಳಲ್ಲಿ ಮಹಾರಥೋತ್ಸವ ಜರುಗಲಿದೆ. ಆ. 23ರಂದು ಬೆಳಗ್ಗೆ 9ಕ್ಕೆ ಪವಮಾನ ಹೋಮ ಹಾಗೂ ಸಂಜೆ 7ಕ್ಕೆ ಸರ್ವಸಮರ್ಪಣೋತ್ಸವ ಜರುಗಲಿದೆ.

ಆರಾಧನಾ ಉತ್ಸವದಲ್ಲಿ ಭಕ್ತರು ಪಾಲ್ಗೊಳ್ಳಬೇಕೆಂದು ಶ್ರೀಮಠದ ವಿಚಾರಣಾಕರ್ತರಾದ ಎ.ಸಿ. ಗೋಪಾಲ ಹಾಗೂ ವ್ಯವಸ್ಥಾಪಕ ಜೆ. ವೇಣುಗೋಪಾಲ ಆಚಾರ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.