ಜಿಲ್ಲೆ

ಹಿರೇಕೆರೂರಲ್ಲಿ ರಾಯಣ್ಣನ ಭಾವಚಿತ್ರ ಅದ್ದೂರಿ ಮೆರವಣಿಗೆ

ಹಿರೇಕೆರೂರ: ಪಟ್ಟಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವದ ನಿಮಿತ್ತ ಶುಕ್ರವಾರ ಅದ್ದೂರಿ ಮೆರವಣಿಗೆ ನಡೆಸಲಾಯಿತು.

ಪೊಲೀಸ್ ಸಬ್ ಇನ್​ಸ್ಪೆಕ್ಟರ್ ನೀಲಪ್ಪ ನೀರಲಗಿ ರಾಯಣ್ಣನ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಚಂದ್ರಶೇಖರ ಕೃಷ್ಣಪ್ಪ ಉಣಕಲ್, ಶಶಿ ಸುತ್ತಕೋಟಿ, ನವೀನ್ ಕುರುಬರ, ಪರಮೇಶ ಕರೇಗಾರ, ನಾಗೇಶ್ ಕರೇಗಾರ, ಪ್ರಶಾಂತ್ ದಿಂದೇರ, ಶಶಿಕಾಂತ್ ಸುತ್ತಕೋಟಿ, ಅಕ್ಷಯ ಲಾಪೋಜಿ, ರಾಕೇಶ್ ಚೌಟಗಿ, ನವೀನ್, ಕಿರಣ ದಿಂದೇರ, ಆಕಾಶ ಮಡಿವಾಳರ, ಶಿವು ಚೌಟಗಿ, ಮಾಲತೇಶ ಹಾವಳಿ, ರಾಘು ಎಲಗಾರ ಹಾಗೂ ಮತ್ತಿತರರು ಇದ್ದರು.