ದೇವದುರ್ಗದ ರಾಯಣ್ಣ ವೃತ್ತದಲ್ಲಿ ಸ್ವಾತಂತ್ರ್ಯ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಆಚರಣೆ ಮಾಡಲಾಯಿತು. ಶಾಸಕಿ ಕರೆಮ್ಮ ಜಿ.ನಾಯಕ, ಪುರಸಭೆ ಅಧ್ಯಕ್ಷೆ ಮಲ್ಲಮ್ಮ ಶಾಂತಪ್ಪ, ತಾಪಂ ಇಒ ಬಸವರಾಜ ಹಟ್ಟಿ, ಸಂಘದ ತಾಲೂಕು ಅಧ್ಯಕ್ಷ ನಾಗರಾಜ ಖಾನಾಪುರ, ಪ್ರಮುಖರಾದ ಆದನಗೌಡ ಬಂಕುಲದೊಡ್ಡಿ, ನಾಗರಾಜ ಪಾಟೀಲ್, ನರಸಣ್ಣ ನಿಲುವಂಜಿ ಇದ್ದರು. 
ಜಿಲ್ಲೆ

ರಾಯಣ್ಣ ದೇಶಪ್ರೇಮ ಯುವಕರಿಗೆ ಮಾದರಿ

ದೇವದುರ್ಗ: ಪರಕೀಯರ ದಬ್ಬಾಳಿಕೆ, ದೌರ್ಜನ್ಯದಿಂದ ನಲುಗಿದ ಭಾರತವನ್ನು ಸ್ವಾತಂತ್ರ್ಯಗೊಳಿಸಲು ಹೋರಾಟ ಮಾಡಿದವರಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ರಾಯಣ್ಣರ ದೇಶಪ್ರೇಮ ಯುವಕರಿಗೆ ಮಾದರಿಯಾಗಿದೆ ಎಂದು ಕರ್ನಾಟಕ ಪ್ರಾದೇಶಿಕ ಕುರುಬರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ನರಸಣ್ಣ ನಿಲುವಂಜಿ ಹೇಳಿದರು.

ಪಟ್ಟಣದ ಕೆಇಬಿ ರಸ್ತೆಯಲ್ಲಿನ ರಾಯಣ್ಣ ವೃತ್ತದಲ್ಲಿ ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ರಾಯಣ್ಣ ಅಪ್ರತಿಮ ದೇಶಭಕ್ತರಾಗಿದ್ದು ಯುವಕರಲ್ಲಿ ರಾಷ್ಟ್ರಭಕ್ತಿ ಹುಟ್ಟುಹಾಕಿದವರು. ತಾಯಿನಾಡು ಉಳಿಸಲು ಬ್ರಿಟಿಷರ ವಿರುದ್ಧ ನಿರಂತರ ಹೋರಾಟ ಮಾಡಿದ್ದಾರೆ. ಇಂಥ ಮಹಾನ್ ನಾಯಕರ ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ ಎಂದರು.

ಶಾಸಕಿ ಕರೆಮ್ಮ ಜಿ.ನಾಯಕ ರಾಯಣ್ಣ ನಾಮಫಲಕಕ್ಕೆ ಪುಷ್ಪನಮನ ಸಲ್ಲಿಸಿದರು. ಪುರಸಭೆ ಅಧ್ಯಕ್ಷೆ ಮಲ್ಲಮ್ಮ ಶಾಂತಪ್ಪ, ತಾಪಂ ಇಒ ಬಸವರಾಜ ಹಟ್ಟಿ, ಸಂಘದ ತಾಲೂಕು ಅಧ್ಯಕ್ಷ ನಾಗರಾಜ ಖಾನಾಪುರ, ಪ್ರಮುಖರಾದ ಆದನಗೌಡ ಬಂಕುಲದೊಡ್ಡಿ, ನಾಗರಾಜ ಪಾಟೀಲ್, ನಿಂಗಣ್ಣ ಮಾಸ್ಟರ್, ಮಲ್ಲಪ್ಪ ಸಾಹುಕಾರ, ಅಯ್ಯಣ್ಣ ದಿವಳಗುಡ್ಡ, ಅಮರೇಶ ಇತರರಿದ್ದರು.