ಹುಬ್ಬಳ್ಳಿ: ತಾಲೂಕಿನ ರಾಯನಾಳ ಗ್ರಾಮದ ಬಡಿಗೇರ ಓಣಿ ಮತ್ತು ಬಸಮ್ಮ ಕಾಲನಿಗೆ ಹೊಂದಿಕೊಂಡಿರುವ ಮುಖ್ಯ ರಸ್ತೆ ಮಳೆಯಿಂದಾಗಿ ಸಂಪೂರ್ಣ ರಾಡಿಮಯವಾಗಿದೆ.
ಗ್ರಾಮಸ್ಥರು, ವಿದ್ಯಾರ್ಥಿಗಳು ಓಡಾಡುವುದು ಕಷ್ಟಕರವಾಗಿದೆ. ಸಂಬಂಧಪಟ್ಟ ಗ್ರಾಮ ಪಂಚಾಯಿತಿ, ಅಧಿಕಾರಿಗಳು ಗಮನ ಹರಿಸಬೇಕೆಂಬುದು ಗ್ರಾಮಸ್ಥರು ಆಗ್ರಹಿಸಿದ್ದಾರೆ.