ಹುಬ್ಬಳ್ಳಿ: ತಾಲೂಕಿನ ರಾಯನಾಳ ಗ್ರಾಮದ ಪ್ರಮುಖ ರಸ್ತೆಯನ್ನು ದುರಸ್ತಿ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.
ರಾಯನಾಳದ ಬಡಿಗೇರ ಓಣಿ ಮತ್ತು ಬಸಮ್ಮ ಕಾಲನಿಗೆ ಹೊಂದಿಕೊಂಡಿರುವ ಗ್ರಾಮದ ಮುಖ್ಯ ರಸ್ತೆಯು ಮಳೆ ಬಂದಾಗ ಸಂಪೂರ್ಣ ಹಾಳಾಗಿತ್ತು. ಜನರು ನಡೆದಾಡುವುದಕ್ಕೂ ಆಗುತ್ತಿರಲಿಲ್ಲ.
ಈ ಬಗ್ಗೆ ವಿಜಯವಾಣಿ ಸಚಿತ್ರ ವರದಿ ಪ್ರಕಟಿಸಿತ್ತು.
ಇದೀಗ ಗ್ರಾಮ ಪಂಚಾಯತ ಅಧಿಕಾರಿಗಳು ರಸ್ತೆ ದುರಸ್ತಿಗೆ ಕ್ರಮ ಕೈಗೊಂಡಿದ್ದು, ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.