ಜಿಲ್ಲೆ

ರಾಯರು ಕಲಿಯುಗ ಕಾಮಧೇನು

ಭರಮಸಾಗರ: ಶ್ರೀ ಗುರುರಾಯರು ಕಲಿಯುಗ ಕಾಮಧೇನುವಾಗಿ ಸರ್ವರ ಕಷ್ಟಗಳನ್ನು ಪರಿಹರಿಸುತ್ತಿರುವ ಮಹಾತ್ಮರು. ಅವರನ್ನು ಮನದಲ್ಲಿ ನೆನೆದರೆ ಸಾಕು ನಮ್ಮನ್ನು ಮಗುವಿನಂತೆ ಸಲಹುತ್ತಾರೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.

ದೊಡ್ಡಪೇಟೆ ಶ್ರೀ ರಾಘವೇಂದ್ರ ಕೃಪಾಶ್ರಮಕ್ಕೆ ಶನಿವಾರ ಭೇಟಿ ನೀಡಿ ಭಕ್ತಿ ಸಮರ್ಪಿಸಿದ ಸಂದರ್ಭ ಮಾತನಾಡಿ, ನಾನು ಎಲ್ಲಿಯೇ ಇರಲಿ ಪ್ರತಿ ವರ್ಷ ಆರಾಧನೆಯಲ್ಲಿ ಪಾಲ್ಗೊಳ್ಳುವ ಪದ್ಧತಿ ಪಾಲಿಸಿಕೊಂಡು ಬರುತ್ತಿದ್ದೇನೆ. ಗುರುಗಳ ಕೃಪೆಯಿಂದ ನನಗೆ ಜನರ ಆಶೀರ್ವಾದ ದೊರೆತಿದೆ ಎಂದರು.

ಅರ್ಚಕರು ಶಾಸಕರಿಗೆ ಶೇಷವಸ್ತ್ರ , ಫಲಮಂತ್ರಾಕ್ಷತೆ, ಪರಿಮಳ ಪ್ರಸಾದ ನೀಡಿ ಆಶೀರ್ವದಿಸಿದರು.

ಕೃಪಾಶ್ರಮದ ಸುಧಾ, ನಾಗರತ್ನಾ, ಗುರು ದೀಕ್ಷಿತ್, ನಾಗಭೂಷಣ ದೀಕ್ಷಿತ್, ರಜತ್, ಭರತ್, ಪನ್ನಗಭೂಷಣ, ಸಾಗರ್, ಚೈತನ್ಯ, ನಾಗಾಲು, ಬಿಂಧುಶ್ರೀ, ಲಕ್ಷ್ಮೀ, ಫಣಿಯಪ್ಪ, ವಿಶ್ವನಾಥ್ ಇದ್ದರು.