ಜಿಲ್ಲೆ

ರಾಯರ ಆರಾಧನಾ ಮಹೋತ್ಸವ 20ರಿಂದ

ಮರಿದೇವ ಹೂಗಾರ


ಹುಬ್ಬಳ್ಳಿ: ಇಲ್ಲಿಯ ನವನಗರದ ಪರಿಮಳ ಮಾರ್ಗದಲ್ಲಿರುವ ರಾಯರಮಠದಲ್ಲಿ ಶ್ರೀಗುರು ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಆ. 20ರಿಂದ 22ರವರೆಗೆ ಏರ್ಪಾಟಾಗಿದೆ.
ಆ. 20ರಂದು ಪೂರ್ವಾರಾಧನೆ ನಿಮಿತ್ತ ಸಂಜೆ 7.15ರಿಂದ 8.15ರವರೆಗೆ ಸಂಹಿತಾ ಚವಟೆ, 8.15ರಿಂದ 9ರವರೆಗೆ ಪ್ರಾಚಿ ದೀಕ್ಷಿತ, 21ರಂದು ಮಧ್ಯಾರಾಧನೆ ನಿಮಿತ್ತ ವೃಂದಾ ವಿ. ಚವಟೆ, ಸಂಪದಾ ವೈದ್ಯ, 22ರಂದು ಉತ್ತರಾರಾಧನೆ ನಿಮಿತ್ತ ಅದಿತಿ ಜೋಶಿ, ಪರಿಮಳ, ಅಶ್ವಿನಿ, ನವೀನ, ಆರಿದ್ರಾ, ಅನನ್ಯಾ, ಅದ್ರೂತ, ಚೈತ್ರಾ ಕುಲಕರ್ಣಿ ಅವರಿಂದ ಸಂಗೀತ ಕಾರ್ಯಕ್ರಮ, 22ರಂದು ಬೆಳಗ್ಗೆ 8.30ಕ್ಕೆ ರಥಾಂಗ ಹೋಮ, 10.30ಕ್ಕೆ ರಥೋತ್ಸವ ನಡೆಯಲಿದೆ.
ಪ್ರತಿ ದಿನ ಬೆಳಗ್ಗೆ 6ಕ್ಕೆ ಸುಪ್ರಭಾತ, 7ಕ್ಕೆ ಅಷ್ಟೋತ್ತರ ಪಾರಾಯಣ, 8.30ಕ್ಕೆ ಪಂಚಾಮೃತ, 10ಕ್ಕೆ ಸೇವಾ ಸಂಕಲ್ಪ, 11ಕ್ಕೆ ಅಲಂಕಾರ ಹಾಗೂ ಹಸ್ತೋದಕ, ಮಧ್ಯಾಹ್ನ 12.30ಕ್ಕೆ ಅಲಂಕಾರ ಬ್ರಾಹ್ಮಣರಿಗೆ ಸಮರ್ಪಣೆ, 1.30ಕ್ಕೆ ತೀರ್ಥ ಪ್ರಸಾದ, ಸಂಜೆ 5.30ಕ್ಕೆ ಪಲ್ಲಕ್ಕಿ ಸೇವೆ, ಅಷ್ಟಾವಧಾನ, ತೊಟ್ಟಿಲು ಸೇವೆ ನಡೆಯಲಿದೆ.
ಆ. 16ರಿಂದ 19ರವರೆಗೆ ಸಂಜೆ 6.30ಕ್ಕೆ ಪಂ. ವೆಂಕಟೇಶಾಚಾರ್ಯ ಜಹಗೀರದಾರ ಅವರು ಗೀತಾ ವಿವೃತ್ತಿ ಕುರಿತು ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.