ದೇವರಹಿಪ್ಪರಗಿ: ಪಟ್ಟಣದಲ್ಲಿ ಪ್ರತಿವರ್ಷ ಛಟ್ಟಿ ಅಮಾವಾಸ್ಯೆಯ ನಂತರ ಜರುಗುವ ರಾವುತರಾಯನ ಪಲ್ಲಕ್ಕಿ ಉತ್ಸವ ಸೋಮವಾರ ಜರುಗಿತು.
ಛಟ್ಟಿ ಅಮಾವಾಸ್ಯೆ ಅಂಗವಾಗಿ ಶನಿವಾರ ಕಾರ್ತಿಕೋತ್ಸವ, ಮಹಾಪ್ರಸಾದ ನೆರವೇರಿಸಲಾಯಿತು. ಪಲ್ಲಕ್ಕಿ ಉತ್ಸವದ ಮೂಲಕ ರಾವುತರಾಯ ಭಾನುವಾರ ಮರಳಿ ಪಟ್ಟಣದ ತನ್ನ ದೇವಸ್ಥಾನಕ್ಕೆ ಮರಳಿದನು.
ಜಾನುವಾರುಗಳ ಬೃಹತ್ ಪ್ರದರ್ಶನ, ಮಾರಾಟ ಮೇಳ ಹಾಗೂ ಅತ್ಯುತ್ತಮ ರಾಸುಗಳಿಗೆ ಬಹುಮಾನ ವಿತರಣೆ ಪಟ್ಟಣದ ವಿಜಯಪುರ ರಸ್ತೆಯಲಿರುವ ಗುರುಬಾಳಪ್ಪ ಯರಗಲ್ ಅವರ ಜಮೀನಿನಲ್ಲಿ ಜರುಗಿತು. ಛಟ್ಟಿ ಜಾತ್ರೆ ವೇಳೆ ಶೀಡಗಟ್ಟಿ ಎಂಬ ಸ್ಥಳದಲ್ಲಿ ಕಾರಣಿಕರು ಹೇಳಿಕೆಗಳನ್ನು ಹೇಳಿದರು.