ಶಹಾಬಾದ್: ಹಬ್ಬ- ಹರಿದಿನಗಳು ನಮ್ಮ ಸಂಸ್ಕೃತಿಯ ಪ್ರತೀಕ. ವರ್ಷದಲ್ಲಿ ಬರುವ ಹತ್ತಾರು ಹಬ್ಬಗಳಿಗೆ ಅದರz್ದೆÃ ವಿಶೇಷತೆ ಮತ್ತು ಅರ್ಥವಿರುತ್ತದೆ. ಅದನ್ನು ತಿಳಿದು ಆಚರಿಸಬೇಕು ಎಂದು ರಾವೂರಿನ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ನುಡಿದರು.
ರಾವೂರಿನ ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಮ್ಮ ಮೌನಾನುಷ್ಠಾನ ಮಂಗಲ ಮಹೋತ್ಸವದಲ್ಲಿ ಆಶೀರ್ವಚನ ನೀಡಿ, ಪ್ರತಿಯೊಂದು ವಸ್ತುವಿಗೂ ಕೊನೆಯ ದಿನಾಂಕ ಇರುವಂತೆ, ನಮ್ಮ ಜೀವನದಲ್ಲಿನ ದ್ವೇಷ, ಅಸೂಯೆ, ಕ್ರೌರ್ಯ, ಹಿಂಸೆಗೂ ಕೊನೆಯ ದಿನವಿರಬೇಕು. ಅಂದಾಗಲೇ ಸುಂದರ ಸಮಾಜ ಹಾಗೂ ಬದುಕು ನಿರ್ಮಾಣ ಸಾಧ್ಯ ಎಂದು ಹೇಳಿದರು.
ಜೀವನದಲ್ಲಿ ನಂಬಿಕೆ ಎನ್ನುವುದು ಬಹಳ ಮುಖ್ಯ, ನಂಬಿಕೆ ಕಳೆದುಕೊಂಡರೆ ಮತ್ತೆ ಪಡೆಯುವುದು ಕಷ್ಟ. ಯುದ್ಧಗಳಿಂದ ಸಾಧ್ಯವಾಗದಿರುವುದನ್ನು ಕರುಣೆ, ಪ್ರೀತಿಯಿಂದ ಗಳಿಸಬಹುದು. ಹಬ್ಬ ಹಾಗೂ ಉತ್ಸವಗಳು ಕೇವಲ ಕಾಟಾಚಾರಕ್ಕೆ ಆಚರಣೆ ಮಾಡುವುದು ಬೇಡ. ನಮ್ಮ ಬದುಕು ಬದಲಾಗಿ, ಸಂಬAಧಗಳು ಗಟ್ಟಿಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಶ್ರೀಮಠದ ಕಾರ್ಯದರ್ಶಿ ಡಾ.ಗುಂಡಣ್ಣ ಬಾಳಿ, ಪ್ರಮುಖರಾದ ಚನ್ನಣ್ಣ ಬಾಳಿ, ಗುರುನಾಥ ಗುದಗಲ್, ತಿಪ್ಪಣ್ಣ ವಗ್ಗರ್, ಸೂರ್ಯಕಾಂತ ಕಾಳೇಕರ, ಅಣ್ಣಾರಾವ ಬಾಳಿ, ಈಶ್ವರ ಬಾಳಿ, ಸಾಬಪ್ಪ ತುಮಕೂರ, ಸೂರ್ಯಕಾಂತ ಕಟ್ಟಿಮನಿ, ದೇವಿಂದ್ರ ತಳವಾರ, ಸಿದ್ದಯ್ಯ ನಂದಿಕೋಲ, ಸಾಹೇಬಗೌಡ ತಳವಾರ, ಬಸವರಾಜ ಮಾಕಾ, ಬಸವರಾಜ ಕೆರಳ್ಳಿ, ನಿಂಗಣ್ಣ ಕೊಳ್ಳಿ, ಚಂದ್ರಶೇಖರ ಹಾವೇರಿ, ಮೋಹನ ಸೂರೆ, ಶರಣು ಜ್ಯೋತಿ ಇತರರಿದ್ದರು.
ಶಿಕ್ಷಕ ಸಿದ್ದಲಿಂಗ ಬಾಳಿ ನಿರೂಪಣೆ ಮಾಡಿ ವಂದಿಸಿದರು.