ಅರಹತೊಳಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಎಲ್.ಎಸ್.ರವಿಕುಮಾರ್ ಅವರನ್ನು ಪ್ರಮುಖರು ಸನ್ಮಾನಿಸಿದರು. ಯತೀಶ್ವರಾಚಾರ್, ಚಂದ್ರಪ್ಪ , ರಾಜೇಶ್ ಪಟೇಲ್, ಜಯದೇವಪ್ಪ ಇತರರಿದ್ದರು.  
ಜಿಲ್ಲೆ

ಅಧ್ಯಕ್ಷರಾಗಿ ರವಿಕುಮಾರ್ ಅವಿರೋಧ ಆಯ್ಕೆ

Shivamogga - Desk - Vinayakumar D B

ಹೊಳೆಹೊನ್ನೂರು: ಅರಹತೊಳಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಲ್.ಎಸ್.ರವಿಕುಮಾರ್ ಅವಿರೋಧವಾಗಿ ಆಯ್ಕೆಯಾದರು.

ಸಿ.ಪಿ.ಚಂದ್ರಶೇಖರ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಭದ್ರಾವತಿ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಜಿ.ಶಾಂತರಾಜ್ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
ಸಂಘದ ಉಪಾಧ್ಯಕ್ಷ ಯತೀಶ್ವರಾಚಾರ್, ಮುಖಂಡರಾದ ಚಂದ್ರಪ್ಪ , ರಾಜೇಶ್ ಪಟೇಲ್, ಜಯದೇವಪ್ಪ, ಶಶಿಧರ್, ಮಲ್ಲೇಶಪ್ಪ, ಚಂದ್ರಶೇಖರ್, ನಾಗರಾಜ್, ಕೆ.ಆರ್.ಶ್ರೀಧರ್ ಇತರರಿದ್ದರು.