ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ ಕೊರಬಾ ಸಾವಿನ ಆರೋಪಿ ಬಂಧನಕ್ಕಾಗಿ ಕೈಗೊಂಡ ಧರಣಿ ಸ್ಥಳಕ್ಕೆ ಭೇಟಿ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಾಳಗಿ ತಾಲೂಕಿನ ಕಲಗುರ್ತಿ ಗ್ರಾಮದ ಕೋಲಿ ಸಮಾಜದ ಯುವಕ ದೇವಾನಂದ ಕೋರಬಾ ಸಾವಿನ ಕೇಸಿನ ಆರೋಪಿತರ ಬಂಧಿಸಲು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಡ್ಡಗಾಲು ಹಾಕಿ, ರಕ್ಷಣೆ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ಎಂಎಲ್‌ಸಿ ಎನ್.ರವಿಕುಮಾರ ಆರೋಪಿಸಿದರು.
ಕೊರಬಾ ಸಾವಿಗೆ ಕಾರಣರಾದವರನ್ನು ಬಂಧಿಸಬೇಕು, ಆರೋಪಿತರ ಜತೆಗೆ ಶಾಮೀಲಾಗಿರುವ ಪೊಲೀಸರನ್ನು ಅಮಾನತ್ತುಗೊಳಿಸಬೇಕು, ಸಾವಿನ ಸತ್ಯಾಂಶ ಬಯಲಿಗೆ ತರಲು ನ್ಯಾಯಾಂಗ ತನಿಖೆ ನಡೆಸುವಂತೆ ಆಗ್ರಹಿಸಿ ಜಿಲ್ಲಾ ಕೋಲಿ ಕಬ್ಬಲಿಗ ಸಮನ್ವಯ ಸಮಿತಿಯ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಜಿ¯್ಲÁಧಿಕಾರಿಗಳ ಕಚೇರಿಯ ಮುಂದೆ ಕೈಗೊಂಡಿರುವ ನಿರಂತರ ಧರಣಿ ಸ್ಥಳಕ್ಕೆ ಭಾನುವಾರ ಶಾಸಕ ಡಾ.ಅವಿನಾಶ ಜಾಧವ ಜತೆಗೂಡಿ ಭೇಟಿ ನೀಡಿ,ಹೋರಾಟಗಾರನ್ನುz್ದೆÃಶಿಸಿ ಮಾತನಾಡಿ, ಇಷ್ಟು ದಿನಗಳಾದರೂ ಯಾಕೆ ಆರೋಪಿಗಳನ್ನು ಬಂಧಿಸುತ್ತಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.
ಆರೋಪಿಗಳು ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಓಡಾಡುತ್ತಿದ್ದಾರೆ. ಅವರೊಂದಿಗೆ ಇರುವ ಪೋಟೋಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಾಕುತ್ತಿದ್ದಾರೆ. ಇದು ನೋಡಿದ ಕಲಬುರಗಿ ಜಿಲ್ಲೆಯ ಜನರು ಆರೋಪಿಗಳನ್ನು ಸಚಿವ ಪ್ರಿಯಾಂಕ್ ರಕ್ಷಣೆ ಮಾಡುತ್ತಿದ್ದಾರೆ. ಬಂಧನವಾಗದAತೆ ನೋಡಿಕೊಳ್ಳುತ್ತಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಯಾಕೆ ಬಂಧಿಸುತ್ತಿಲ್ಲ ಎಂಬುದರ ಕುರಿತು ಸಹ ತನಿಖೆಯಾಗಲಿ ಎಂದು ಸವಾಲು ಹಾಕಿದರು.
ಘಟನೆ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು. ಮೃತ ದೇವಾನಂದ ಕುಟುಂಬದವರಿಗೆ ೨೫ ಲಕ್ಷ ರೂ.ಪರಿಹಾರ ನೀಡಬೇಕು. ಸರ್ಕಾರಿ ನೌಕರಿ ನೀಡಬೇಕು, ತಪ್ಪು ಮಾಡಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ರವಿಕುಮಾರ ಆಗ್ರಹಿಸಿದರು.
ಮುಖಂಡರಾದ ಅವಣ್ಣ ಮ್ಯಾಕೇರಿ,ಶರಣಪ್ಪ ತಳವಾರ, ಶೋಭಾ ಬಾಣಿ, ಸಂತೋಷ ತಳವಾರ, ಶಾಂತಪ್ಪ ಕೂಡಿ, ಬಸವರಾಜ ಹರವಾಳ, ಅಂಬು ಡಿಗ್ಗಿ ಮೊದಲಾದವರಿದ್ದರು.