ಮಾನ್ವಿ: ತಾಲೂಕು ವಕೀಲರ ಸಂಘದ ಚುನಾವಣೆಯಲ್ಲಿ ರವಿಕುಮಾರ ಪಾಟೀಲ್ ಅಧ್ಯಕ್ಷರಾಗಿ ಆಯ್ಕೆಯಾದರು.
ರವಿಕುಮಾರ ಪಾಟೀಲ್ ಮತ್ತು ದುಮಣ್ಣ ನಾಯಕ ನಡುವೆ ಸ್ಪರ್ಧೆ ನಡೆದಿತ್ತು. ಒಟ್ಟು 204 ಮತಗಳಲ್ಲಿ 196 ಮತಗಳು ಚಲಾವಣೆಯಾಗಿದವು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ದುಮಣ್ಣ ನಾಯಕ 52 ಮತ, ರವಿಕುಮಾರ ಪಾಟೀಲ್ 143 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಕೊರವಯ್ಯ, ಮನೋಹರ್, ಪ್ರಧಾನ ಕಾರ್ಯದರ್ಶಿ ಚನ್ನಬಸವ, ಜಂಟಿ ಕಾರ್ಯದರ್ಶಿ ಈಶಪ್ಪ, ಖಜಾಂಚಿ ದತ್ತಾತ್ರೇಯ, ಎಂ. ಮಲ್ಲೇಶ ಗೆಲವು ಸಾಧಿಸಿದ್ದಾರೆ.