ಮಂಗಳೂರು : ದೃಷ್ಟಿ ಮೀಡಿಯಾ ಪ್ರೊಡಕ್ಷನ್ ನಿರ್ಮಾಣದ, ಸಂತೋಷ್ ಕೊಡಂಕೇರಿ ನಿರ್ದೇಶನದ ‘ರವಿಕೆ ಪ್ರಸಂಗ ‘ಕನ್ನಡ ಚಲನಚಿತ್ರ ಫೆ. 16ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.
ಕರಾವಳಿ ಜಿಲ್ಲೆಯಲ್ಲೂ ಏಕ ಕಾಲದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಮಂಗಳೂರಿನಲ್ಲಿ ಪಿವಿಆರ್, ಸಿನಿಪೊಲಿಸ್, ಭಾರತ್ ಸಿನಿಮಾಸ್, ಉಡುಪಿಯಲ್ಲಿ ಡಯನಾ, ಮಣಿಪಾಲದಲ್ಲಿ ಪಿವಿಆರ್ ಐನಾಕ್ಸ್, ಭಾರತ್ ಸಿನಿಮಾಸ್, ಕುಂದಾಪುರದಲ್ಲಿ
ಭಾರತ್ ಸಿನಿಮಾಸ್, ಸುರತ್ಕಲ್ನಲ್ಲಿ ಸಿನಿ ಗ್ಯಾಲಕ್ಸಿ, ಪಡುಬಿದಿರೆಯಲ್ಲಿ ಭಾರತ್ ಸಿನಿಮಾಸ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ಪ್ಲಾನೆಟ್, ಬೈಂದೂರಿನಲ್ಲಿ ಶಂಕರ್, ಸುಳ್ಯದಲ್ಲಿ ಸಂತೋಷ್ ಚಿತ್ರಮಂದಿರದಲ್ಲಿ ರವಿಕೆ ಪ್ರಸಂಗ ಸಿನಿಮಾ ತೆರೆ ಕಾಣಲಿದೆ.
ಮಧ್ಯಮ ವರ್ಗದ ಕುಟುಂಬವೊಂದರ ಹೆಣ್ಣು ಮಗಳ ಸುತ್ತ ಹೆಣೆಯಲಾಗಿರುವ ಕಥೆ ಇದಾಗಿದ್ದು, ರವಿಕೆ ಪ್ರಸಂಗವೊಂದು ಕೋರ್ಟ್ ಮೆಟ್ಟಿಲೇರಿದಾಗ ಸಮಾಜ ಹೆಣ್ಣನ್ನು ನೋಡುವ ಪರಿ ಈ ಚಿತ್ರದ ಎಳೆಯಾಗಿದೆ .ಚಿತ್ರದಲ್ಲಿ ಸುಮನ್ ರಂಗನಾಥ್, ರಾಕೇಶ್ ಮಯ್ಯ, ಸಂಪತ್ ಮೈತ್ರೇಯ, ಪದ್ಮಜಾ ರಾವ್, ಕೃಷ್ಣಮೂರ್ತಿ ಕವತ್ತಾರ್, ಪ್ರವೀಣ್ ಅಥರ್ವ, ರಘು ಪಾಂಡೇಶ್ವರ್, ಹನುನಂತೇ ಗೌಡ, ಖುಷಿ ಆಚಾರ್, ಹನುಮಂತ ರಾವ್ ಕೆ. ಮುಂತಾದವರು ನಟಿಸಿದ್ದಾರೆ. ಮುರಳೀಧರ್ ಎನ್. ಅವರ ಛಾಯಾಗ್ರಹಣ, ರಘು ಶಿವರಾಮ್ ಅವರ ಸಂಕಲನ, ವಿನಯ್ ಶರ್ಮಾ ಅವರ ಸಂಗೀತ, ರಮೇಶ್‌ಕೃಷ್ಣ ಅವರ ಹಿನ್ನೆಲೆ ಹಾಗೂ ಕಿರಣ್ ಕಾವೇರಪ್ಪ ಸಾಹಿತ್ಯ ಒದಗಿಸಿದ್ದಾರೆ. ಸುಳ್ಯ ತಾಲೂಕಿನ ಸಂಪಾಜೆ ಆಸುಪಾಸಿನಲ್ಲಿ ಚಿತ್ರೀಕರಣ ನಡೆದಿದೆ.
ರವಿಕೆ ಪ್ರಸಂಗ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಗೊಂಡು ಜನರಿಂದ ಮೆಚ್ಚುಗೆ ಗಳಿಸಿದೆ. ಸಿನಿಮಾವನ್ನು ಮಾರ್ಷ್ ಡಿಸ್ಟ್ರಿಬ್ಯೂಟರ್ಸ್ ಸಂಸ್ಥೆ ವಿಶಾಲ ಕರ್ನಾಟಕದಲ್ಲಿ ಬಿಡುಗಡೆಗೊಳಿಸುತ್ತಿದ್ದಾರೆ. ವಿದೇಶದಲ್ಲೂ ಸಿನಿಮಾ ಬಿಡುಗಡೆಗೊಳ್ಳಲಿದೆ. ಚಿತ್ರದಲ್ಲಿ ಮಂಗಳೂರು ಕನ್ನಡ ಶೈಲಿ ಬಳಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.