ಉಪ್ಪಿನಂಗಡಿ: ಪೊಲೀಸ್ ಇಲಾಖೆಯ ತನಿಖಾ ಕಾರ್ಯದಲ್ಲಿ ವೈಜ್ಞಾನಿಕ ಕೌಶಲ ಸ್ಪರ್ಧೆಯಲ್ಲಿ ಉಪ್ಪಿನಂಗಡಿಯ ವೃತ್ತನಿರೀಕ್ಷಕ ರವಿ ಬಿ.ಎಸ್. ತಂಡ ಅತ್ಯುತ್ತಮ ನಿರ್ವಹಣೆ ತೋರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.
ಪೊಲೀಸ್ ಇಲಾಖೆಯಲ್ಲಿ ವಿವಿಧ ಅಪರಾಧ ಕೃತ್ಯಗಳು ಘಟಿಸಿದಾಗ ನಡೆಸಲಾಗುವ ತನಿಖಾ ಪ್ರಕ್ರಿಯೆಯಲ್ಲಿ ವೈಜ್ಞಾನಿಕ ನೆಲೆಗಟ್ಟಿನ ಕ್ರಿಮಿನಿನಲ್ ಲಾ, ಫಿಂಗರ್ ಪ್ರಿಂಟ್, ಫಾರೆನ್ಸಿಕ್ ಫೋಟೋ ಸಹಿತ ವಿವಿಧ 6 ಆಯಾಮಗಳಲ್ಲಿ ಕೌಶಲ ತೋರುವುದಕ್ಕೆ ಸಂಬಂಧಿಸಿ ಜಿಲ್ಲಾಮಟ್ಟ, ವಲಯಮಟ್ಟ, ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಸಾಧನೆ ತೋರಿದ ರವಿ ಬಿ.ಎಸ್.ಅವರ ತಂಡ ಇದೀಗ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು, ಜಾರ್ಖಂಡ್‌ನಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ಅವರೊಂದಿಗೆ ಪೊಲೀಸ್ ಉಪ ನಿರೀಕ್ಷಕರಾದ ಚಿತ್ರದುರ್ಗದ ಲೋಹಿತ್, ಕಾರವಾರದ ರಾಜ್ ಕುಮಾರ್ ತಂಡದಲ್ಲಿದ್ದಾರೆ.