ಜಿಲ್ಲೆ

ರಾವಸಾಹೇಬ ಕೊಡುಗೆ ಅಪಾರ

ಪ್ರಶಾಂತ ಹೂಗಾರ

ಬೋರಗಾಂವ: ಶೋಷಿತರ ಅಭಿವೃದ್ಧಿಗೆ ದಿ.ರಾವಸಾಹೇಬ ಪಾಟೀಲ ಅವರು ಅರಿಹಂತ ಸಂಸ್ಥೆ ಮೂಲಕ ಶ್ರಮಿಸಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ದಿಗಂಬರ ಕಾಂಬಳೆ ಹೇಳಿದರು.

ಪಟ್ಟಣದ 6, 9, 17ನೇ ವಾರ್ಡ್‌ಗಳಲ್ಲಿ 54 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗಳಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ದೇವಾಲಯ, ಶುದ್ಧ ನೀರಿನ ಘಟಕ, ಶೈಕ್ಷಣಿಕ ನಿಧಿ, ಪಂಚಾಯಿತಿಯಿಂದ ವಿಶೇಷ ಅನುದಾನದಡಿ ರಸ್ತೆ, ಒಳಚರಂಡಿ, ವಿದ್ಯುತ್, ವ್ಯಾಯಾಮ ಸಾಮಗ್ರಿ, ಉದ್ಯಾನ ಸೌಂದರ್ಯೀಕರಣ ಮಾಡಲು ಉತ್ತಮ ಪಾಟೀಲ ಕೊಡುಗೆ ನೀಡಿದ್ದಾರೆ ಎಂದರು.

ಯುವ ಮುಖಂಡ ಉತ್ತಮ ಪಾಟೀಲ ಮಾತನಾಡಿ, ಬೋರಗಾಂವ ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಎಲ್ಲ ಸದಸ್ಯರು ಕೆಲಸ ಮಾಡುತ್ತಿದ್ದು, ವಿಶೇಷ ಅನುದಾನ ಪಡೆದು ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡುತ್ತಿದ್ದಾರೆ. ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರಲಾಗುವುದು ಎಂದರು.

ಪಪಂ ಅಧ್ಯಕ್ಷ ಪಿಂಟು ಕಾಂಬಳೆ, ಉಪಾಧ್ಯಕ್ಷೆ ಭಾರತಿ ವಾಸವಾಡೆ, ಸದಸ್ಯೆಯರಾದ ಸಂಗೀತಾ ಶಿಂಗೆ, ಶೋಭಾ ಹಾವಲೆ, ವರ್ಷಾ ಮನಗುತ್ತೆ, ರುಕ್ಸಾನಾ ಅರಾಜ್, ಸದಸ್ಯರಾದ ರಾಜು ಮಗದುಮ್, ಅಮರ ಶಿಂಗೆ ಅಶೋಕ ಪಾಟೀಲ, ಪೀರಗೌಡ ಪಾಟೀಲ, ರಾಜು ಗಜರೆ, ರಾಜು ಶಿಂಗೆ, ಉಮೇಶ ಕಾಂಬಳೆ, ವಿಲಾಸ ಕಾಂಬಳೆ, ರಮೇಶ ಕುರಳೆ, ಅಶ್ವಿನ ಮಾನವಿ, ಭೂಷಣ ಮಧಾಳೆ, ಸಿಕಂದರ ಕಾಂಬಳೆ, ಬಬ್ಲು ಕಾಂಬಳೆ, ಏಕನಾಥ ಕಟ್ಟಿ, ಶಶಿಕಾಂತ ಕಟ್ಟಿ, ರಾಜು ಕಾಂಬಳೆ, ಶಂಭು ಕಾಂಬಳೆ, ದೀಪಕ ಹಿರೇಮನಿ, ಸಾಗರ ಮಧಾಳೆ, ಅಣ್ಣಾಸಾಹೇಬ ಹಿರೇಮನಿ, ಅಶೋಕ ನೇಜೆ, ತಾನಾಜಿ ಮಧಾಳೆ ಇತರರಿದ್ದರು.