ಜಿಲ್ಲೆ

ರಾವಣ ಸುರುಡು ಬಿಡುಗಡೆಗೆ ಸಿದ್ಧ

Dharwada - Basavaraj Idli

ಹುಬ್ಬಳ್ಳಿ: ರಾವಣ ಪ್ರೊಡಕ್ಷನ್ ಬ್ಯಾನರ್ ಅಡಿ ಸಸ್ಪೆನ್ಸ್-ಥ್ರಿಲ್ಲರ್ "ರಾವಣ ಸುರುಡು' ಚಿತ್ರವು ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ಧವಾಗಿದೆ ಎಂದು ಸಿನಿಮಾದ ನಿರ್ದೇಶಕ ಮತ್ತು ನಟ ರಾವಣ ಕತ್ತಿ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಯೂಟ್ಯೂಬ್ನಲ್ಲಿ ಚಿತ್ರದ ಧ್ವನಿಸುರಳಿ ಬಿಡುಗಡೆಯಾಗಿದೆ. ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರ ತೆಲುಗಿನಲ್ಲಿ ತೆರೆ ಕಾಣಲಿದೆ. ಕನ್ನಡದಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂದರು.

ತೆಲುಗು ಭಾಷೆಯಲ್ಲಿ ರಾವಣ ಸುರುಡಾ, ಕನ್ನಡದಲ್ಲಿ ಅಹಂ ರಾವಣಾಸುರಾ ಶೀಷಿರ್ಕೆಯಡಿ ಬಿಡುಗಡೆಯಾಗಲಿದೆ. ಉತ್ತರ ಕರ್ನಾಟಕ ಭಾಗದ ಕಲಾವಿದರು ಹೆಚ್ಚಾಗಿ ನಟಿಸಿದ್ದಾರೆ. ಸುರೇಶ ಕರಜಗಿ, ಸುನೀಲ ತಳವಾರ, ಅರವಿಂದ ಮುಳಗುಂದ, ರವಿಕುಮಾರ, ಮುರಳಿಕೃಷ್ಣ ತೇಜಸ್ವಿ, ಪ್ರಕಾಶ ನಟಿಸಿದ್ದಾರೆ. ನಾಯಕ ನಟಿಯಾಗಿ ರಂಭಾ ಕತ್ತಿ ಅಭಿನಯಿಸಿದ್ದಾರೆ ಎಂದು ತಿಳಿಸಿದರು.

ಚಿತ್ರದಲ್ಲಿ ಐದು ಹಾಡುಗಳಿವೆ. ಎರಡು ಹಾಡುಗಳನ್ನು ತೆಲುಗಿನ ಗಾಯಕರು ಹಾಡಿದರೆ, ಉಳಿದವನ್ನು ಕನ್ನಡದ ಗಾಯಕ &-ಗಾಯಕಿಯರು ಹಾಡಿದ್ದಾರೆ. ಬೆಳಗಾವಿ, ಗೋವಾ, ಕರ್ನೂಲ್, ಶಿರಸಿ, ಹೊನ್ನಾವರ ವಿವಿಧ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದರು.