ಇಳಕಲ್ಲದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿದರು. ನಗರ ಘಟಕ ಅಧ್ಯಕ್ಷ ಅರವಿಂದ ಮಂಗಳೂರ, ನಗರಸಭೆ ಮಾಜಿ ಅಧ್ಯಕ್ಷ ಲಕ್ಷ್ಮಣ ಗುರಂ, ಶೋಭಾ ಆಮದಿಹಾಳ ಇದ್ದರು. 
ಜಿಲ್ಲೆ

ಶಾಸಕರ ದುರಾಡಳಿತದಿಂದ ರಾವಣ ರಾಜ್ಯ ನಿರ್ಮಾಣ

ಗಿರೀಶ ಸಗರ

ಇಳಕಲ್ಲ: ಹುನಗುಂದ ವಿಧಾನಸಭಾ ಮತಕ್ಷೇತ್ರದಲ್ಲಿ ಶಾಸಕರ ದುರಾಡಳಿತದಿಂದಾಗಿ ರಾವಣರಾಜ್ಯ ನಿರ್ಮಾಣವಾಗಿದೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಟೀಕಿಸಿದರು.

ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಮರಳು ದಂಧೆ, ಜೂಜಾಟ ಅವ್ಯಾಹತವಾಗಿ ನಡೆದಿವೆ.

ವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಹಿಂದೆ ನಾನು ಮಾಡಿದ್ದ ಕಾಮಗಾರಿಗಳಿಗೆ ಮರು ಭೂಮಿಪೂಜೆ ನೆರವೇರಿಸಲಾಗಿದೆ. 24*7 ಕುಡಿಯುವ ನೀರಿನ ಕಾಮಗಾರಿಯ ಒವರಹೆಡ್ ಟ್ಯಾಂಕ್ ನಿರ್ಮಾಣ ಸೇರಿ ಹಲವಾರು ಕಾಮಗಾರಿಗಳು ಹಾಗೆ ನಿಂತಿವೆ ಎಂದು ತಿಳಿಸಿದರು.

ಕ್ಷೇತ್ರದಲ್ಲಿ ಎಲ್ಲಿ ಚುನಾವಣೆಗಳು ನಡೆಯುತ್ತವೆಯೋ ಅಲ್ಲಿನ ಚುನಾವಣಾಧಿಕಾರಿಗಳ ಮೇಲೆ ಪ್ರಭಾವ ಬೀರಿ ಬಿಜೆಪಿ ಮತ್ತು ಇತರ ಪಕ್ಷಗಳ ಅಭ್ಯರ್ಥಿಗಳ ನಾಮಪತ್ರ ರದ್ದುಗೊಳಿಸುವ ಅತಿರೇಕದ ಕೆಲಸಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಅಲ್ಲದೆ, ಕ್ಷೇತ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ದೂರಿದರು.

ಪರಿಸ್ಥಿತಿ ಹೀಗೆ ಮುಂದವರಿದರೆ ಈ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿ ಕ್ರಮ ಕೈಗೊಳ್ಳಲು ಆಗ್ರಹಿಸಲಾಗುವುದೆಂದು ತಿಳಿಸಿದರು.

ನಗರ ಘಟಕ ಅಧ್ಯಕ್ಷ ಅರವಿಂದ ಮಂಗಳೂರ, ನಗರಸಭೆ ಮಾಜಿ ಅಧ್ಯಕ್ಷ ಲಕ್ಷ್ಮಣ ಗುರಂ, ಶೋಭಾ ಆಮದಿಹಾಳ, ಸದಸ್ಯರಾದ ಸುಗುರೇಶ ನಾಗಲೋಟಿ, ಗಣೇಶ ಯರಡೋಣಿ, ಸವಿತಾ ಆರಿ, ಲಕ್ಷ್ಮೀಬಾಯಿ ಹಾದಿಮನಿ, ಚಂದ್ರಶೇಖರ ಏಕಬೋಟೆ ಉಪಸ್ಥಿತರಿದ್ದರು.