ಜಿಲ್ಲೆ

ರಟ್ಟಿಹಳ್ಳಿಯಲ್ಲಿ ನ್ಯಾಯಾಲಯ ಶೀಘ್ರ ಪ್ರಾರಂಭ

ರಟ್ಟಿಹಳ್ಳಿ: ಪಟ್ಟಣದ ಮಾಸೂರು ರಸ್ತೆಯ ತೋಟಗಾರಿಕೆ ಇಲಾಖೆ ಕಟ್ಟಡದಲ್ಲಿ ನ್ಯಾಯಾಲಯ ಆರಂಭಿಸಲು ಸರ್ಕಾರ ಈಗಾಗಲೇ ಆದೇಶ ಮಾಡಿದೆ. ಹಳೆಯ ಕಟ್ಟಡವನ್ನು ನಾಯಾಯಲದ ಅವಶ್ಯಕತೆಗೆ ಅನುಗುಣವಾಗಿ ನವೀಕರಣ ಮಾಡುವ ಕಾಮಗಾರಿ ಪ್ರಗತಿಯಲ್ಲಿದೆ. ಶೀಘ್ರದಲ್ಲಿ ಕಾಮಗಾರಿ ಮುಗಿಸಿ ನ್ಯಾಯಾಲಯ ಪ್ರಾರಂಭಿಸಲಾಗುವುದು ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ, ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಹೇಳಿದರು.

ಪಟ್ಟಣದ ನ್ಯಾಯಾಲಯದ ಕಟ್ಟಡದ ನವೀಕರಣ ಕಾಮಗಾರಿಯನ್ನು ಶುಕ್ರವಾರ ಪರಿಶೀಲಿಸಿ ಅವರು ಮಾತನಾಡಿದರು. ಈಗಾಗಲೇ ಶೇ. 70ರಷ್ಟು ಕಾಮಗಾರಿ ಮುಗಿದಿದೆ. ನೀರಿಗಾಗಿ ಬೋರ್​ವೆಲ್ ಸೇರಿ ನ್ಯಾಯಾಲಯಕ್ಕೆ ಮೊದಲು ಮೂಲಸೌಕರ್ಯಗಳ ವ್ಯವಸ್ಥೆ ಮಾಡಬೇಕಿದೆ ಎಂದರು.

ಹಿರಿಯ ವಕೀಲ ಪಿ.ಡಿ. ಬಸನಗೌಡ್ರ, ವಸಂತ ದ್ಯಾವಕ್ಕಳವರ, ಪ್ರಕಾಶ ಬನ್ನಿಕೋಡ, ಜಿಲ್ಲಾ ಕಾಂಗ್ರೆಸ್ ವಕ್ತಾರ ವಿನಯ ಪಾಟೀಲ, ವೀರನಗೌಡ ಪ್ಯಾಟಿಗೌಡ್ರ, ಮಂಜಣ್ಣ ಎಲಿವಾಳ, ಮಹೇಶ ಮಳಗೊಂಡರ, ಜಗದೀಶ ಸಾಮ್ನೇಕಾರ, ಬಿ.ಎಸ್. ಬಸನಗೌಡ್ರ, ಜಯಪ್ಪ ದ್ಯಾಮನಕಟ್ಟಿ ಇತರರು ಇದ್ದರು.