ಜಿಲ್ಲೆ

ಎರಡು ಸೌಂಡ್​ ಬಾಕ್ಸ್​ ಹಚ್ಚಿದ್ದಕ್ಕೂ ಪ್ರಕರಣ ದಾಖಲು

Haveri - Kariyappa Aralikatti

ರಟ್ಟಿಹಳ್ಳಿ: ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಎರಡು ಸೌಂಡ್​ ಬಾಕ್ಸ್​ ಹಚ್ಚಿದ ಆರೋಪದಡಿ ಗಣೇಶೋತ್ಸವ ಮಂಡಳಿ ಹಾಗೂ ಸೌಂಡ್​ ಬಾಕ್ಸ್​ ಮಾಲೀಕನ ವಿರುದ್ಧ ರಟ್ಟಿಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದ ಗಣೇಶ ಮಂಡಳಿ ಅಧ್ಯಕ್ಷ ಬಸವರಾಜ ಫಕ್ಕೀರಪ್ಪ ಆಡಿನವರ ಹಾಗೂ ಕವಲೆತ್ತು ಗ್ರಾಮದ ವಿನಾಯಕ ಸೌಂಡ್​ ಸಿಸ್ಟ್​ಂ ಮಾಲೀಕ ಶರತಕುಮಾರ ಶಿವಮೂರ್ತೆಪ್ಪ ಡಮ್ಮಳ್ಳಿ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿರುವುದು.

ಇವರು ಗಣೇಶ ಮೂತಿರ್ ವಿಸರ್ಜನೆ ಮೆರವಣಿಗೆಯಲ್ಲಿ ಸೌಂಡ್​ ಬಾಕ್ಸ್​ ಹಚ್ಚಿ ಹೆಚ್ಚಿನ ಶಬ್ದ ಮಾಲಿನ್ಯ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.