ರಟ್ಟಿಹಳ್ಳಿ: ದೇವಸ್ಥಾನದ ಗರ್ಭಗುಡಿಯ ಬಾಗಿಲ ಬೀಗ ಮುರಿದು 1 ಲಕ್ಷ ರೂ. ಹಣವಿರುವ ಹುಂಡಿ ಕಳ್ಳತನ ಮಾಡಿದ ಘಟನೆ ಪಟ್ಟಣದ ಪ್ರಸಾಧಿಮಠದ ಶನೇಶ್ವರ ಮಂದಿರದಲ್ಲಿ ನಡೆದಿದೆ.
ದೇವಸ್ಥಾನದಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಗರ್ಭಗುಡಿಯ ಬೀಗ ಮುರಿದು ಒಳಗೆ ನುಗ್ಗಿ ದೇವರ ಮುಂದಿದ್ದ 1 ಲಕ್ಷ ರೂ. ಮೌಲ್ಯದ ಹುಂಡಿ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.