ರಟ್ಟಿಹಳ್ಳಿ: ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಬಳಿಕ ರಟ್ಟಿಹಳ್ಳಿ ಪ್ರಥಮ ಚುನಾವಣೆಗೆ ಸಿದ್ಧವಾಗಿದೆ. ರಾಜ್ಯ ಚುನಾವಣಾ ಆಯೋಗ ಜಿಲ್ಲಾಧಿಕಾರಿಗಳ ಕಚೇರಿಗೆ ಪೂರ್ವಸಿದ್ಧತೆ ಕ್ರಮ ಕೈಗೊಳ್ಳುವಂತೆ ಜೂ.27ರಂದು ಆದೇಶ ಹೊರಡಿಸಿದೆ.
ಚುನಾವಣೆಗೆ ಸಂಬಂಧಿಸಿದ ಮಾಹಿತಿಗಳ ವರದಿಯನ್ನು ಸಲ್ಲಿಸುವಂತೆ ತಾಲೂಕು ಆಡಳಿತಕ್ಕೆ ಸೂಚಿಸಲಾಗಿದೆ.
ಸಿದೆ. ಎಲ್ಲ ಮಾಹಿತಿಗಳನ್ನು ಪಡೆದ ಬಳಿಕ ರಟ್ಟಿಹಳ್ಳಿ ಪಟ್ಟಣ ಪಂಚಾಯಿತಿಗೆ ಪ್ರಥಮ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಘೋಷಣೆ ಮಾಡುವ ನಿರೀಕ್ಷೆ ಇದೆ.
ರಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಆಗಿದ್ದಾಗ 12 ವಾರ್ಡ್‌ಗಳಲ್ಲಿ 36 ಗ್ರಾ.ಪಂ. ಸದಸ್ಯರನ್ನು ಒಳಗೊಂಡಿತ್ತು. 2020ರಲ್ಲಿ ರಾಜ್ಯ ಸರ್ಕಾರ ರಟ್ಟಿಹಳ್ಳಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿತ್ತು. ಪಟ್ಟಣ ಪಂಚಾಯಿತಿಯಾಗಿ ಘೋಷಣೆಯಾದ ಬಳಿಕ 5 ವರ್ಷಗಳಿಂದ ಯಾವುದೇ ಚುನಾವಣೆ ನಡೆಯದೆ ತಹಸೀಲ್ದಾರ್ ಆಡಳಿತಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸಾರ್ವತ್ರಿಕ ಚುನಾವಣೆ ಸಂಬಂಧ ಮತದಾರರ ಪಟ್ಟಿ ತಯಾರಿಕೆ, ಮತದಾನ ಕೇಂದ್ರಗಳ ಪಟ್ಟಿ, ಸಿಬ್ಬಂದಿ ವರ್ಗ ನೇಮಕ, ಇವಿಎಂಗಳ ಸಂಗ್ರಹ, ಚುನಾವಣಾಧಿಕಾರಿಗಳ ನೇಮಕ, ಅಭ್ಯರ್ಥಿಗಳ ಚುನಾವಣಾ ವೆಚ್ಚಗಳ ಪರಿಶೀಲನೆಗೆ ಅಧಿಕಾರಿಗಳ ನೇಮಕ, ಗುರುತು ಸೀಲ್‌ಗಳ ತಯಾರಿಕೆ ಹಾಗೂ ನಿರ್ವಹಣೆ, ಚುನಾವಣಾ ಸಾಮಗ್ರಿಗಳ ಸಂಗ್ರಹಣೆ ಕುರಿತು ಪೂರ್ವಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಆದೇಶ ನೀಡಿದೆ. ಆದೇಶದನ್ವಯ ಸ್ಥಳೀಯ ತಾಲೂಕು ಆಡಳಿತ ಚುನಾವಣೆಯ ಪೂರ್ವಸಿದ್ಧತೆ ಕಾರ್ಯ ಆರಂಭಿಸಿದೆ.
15 ವಾರ್ಡ್‌ಗಳ ವಿಂಗಡಣೆ- ಮೀಸಲಾತಿ ಅಧಿಸೂಚನೆ ಪ್ರಕಟ: 2011ರ ಜನಗಣತಿ ಆಧರಿಸಿ ರಟ್ಟಿಹಳ್ಳಿ ಪಟ್ಟಣ ಪಂಚಾಯಿತಿಗೆ ವಾರ್ಡ್‌ವಾರು ಮೀಸಲಾತಿ ನಿಗದಿಪಡಿಸಿ ಪ್ರಾಥಮಿಕ ಅಧಿಸೂಚನೆಯನ್ನು ಕರ್ನಾಟಕ ವಿಶೇಷ ರಾಜ್ಯ ಪತ್ರ 2022 ಜನವರಿ 18 ರಂದು ಪ್ರಕಟಿಸಿದೆ. ಆಕ್ಷೇಪಣೆಗಳನ್ನು ಪರಿಗಣಿಸಿ 2025 ೆಬ್ರವರಿ 17ರಂದು 15 ವಾರ್ಡ್‌ಗಳಿಗೆ ಮೀಸಲಾತಿ ಅಧಿಸೂಚನೆ ಪ್ರಕಟಿಸಿದೆ.
ವಾರ್ಡ್‌ವಾರು ಮೀಸಲಾತಿ: ವಾರ್ಡ್ ಸಂಖ್ಯೆ 1 ಪರಿಶಿಷ್ಟ ಪಂಗಡ, 2 ಹಿಂದುಳಿದ ವರ್ಗ (ಎ) ಮಹಿಳೆ, 3 ಸಾಮಾನ್ಯ, 4 ಸಾಮಾನ್ಯ, 5 ಹಿಂದುಳಿದ ವರ್ಗ (ಎ), 6 ಸಾಮಾನ್ಯ ಮಹಿಳೆ, 7 ಹಿಂದುಳಿದ ವರ್ಗ (ಬಿ), 8 ಹಿಂದುಳಿದ ವರ್ಗ (ಎ) ಮಹಿಳೆ, 9 ಸಾಮಾನ್ಯ, 10 ಸಾಮಾನ್ಯ, 11 ಹಿಂದುಳಿದ ವರ್ಗ (ಎ), 12 ಸಾಮಾನ್ಯ ಮಹಿಳೆ, 3 ಸಾಮಾನ್ಯ ಮಹಿಳೆ, 14 ಪರಿಶಿಷ್ಟ ಜಾತಿ, 15 ಸಾಮಾನ್ಯ ಮಹಿಳೆ ಎಂದು ನಿಗದಿಪಡಿಸಲಾಗಿದೆ.