ಕಿಕ್ಕೇರಿ: ಸಮೀಪದ ಹಿರೀಕಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ರತ್ನಮ್ಮ ರಾಮಕೃಷ್ಣ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದೆ ಇದ್ದ ರಾಜಮ್ಮ ರಾಮಕೃಷ್ಣೇಗೌಡ ಅವರ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ರತ್ನಮ್ಮ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸಿದ ಕಾರಣ ಚುನಾವಣಾಧಿಕಾರಿ ಡಾ.ಲೋಕೇಶ್ ಅವಿರೋಧ ಆಯ್ಕೆ ಘೋಷಿಸಿದರು.
ನೂತನ ಅಧ್ಯಕ್ಷೆ ರತ್ನಮ್ಮ ರಾಮಕೃಷ್ಣ ಮಾತನಾಡಿ, ತಮ್ಮ ಅವಧಿಯಲ್ಲಿ ನರೇಗಾ ಯೋಜನೆಯಡಿಯಲ್ಲಿ ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು ಎಮದು ತಿಳಿಸಿದರು.
ನೂತನ ಅಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆಯೇ ಬೆಂಬಲಿತ ಸದಸ್ಯರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಕೆ.ಆರ್.ಪೇಟೆ ಪುರಸಭೆ ಮಾಜಿ ಸದಸ್ಯ ವಿನೋದ್‌ಕುಮಾರ್, ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪುರುಷೋತ್ತಮ್, ಮುಖಂಡರಾದ ರವೀಂದ್ರಬಾಬು, ಚಿಕ್ಕೋನಹಳ್ಳಿ ಮಂಜುನಾಥ್, ಹಿರೀಕಳಲೆ ಮಂಜುನಾಥ್, ಎಚ್.ಎಂ ರಾಮೇಗೌಡ, ಬಲರಾಮ್, ನಾಗರಾಜ್, ದೇವರಾಜು, ಹೆಚ್.ಜೆ. ಬಸವರಾಜು, ಗ್ರಾಪಂ ಉಪಾಧ್ಯಕ್ಷ ಟಿ.ಎನ್.ಮಹೇಶ್, ಸದಸ್ಯರಾದ ರಾಜಮ್ಮ, ಮಂಜುನಾಥ್, ಸುಂದ್ರಮ್ಮ, ಪದ್ಮಮ್ಮ, ಪುಷ್ಪಲತಾ, ಮಮತ, ಕಾಂತರಾಜು, ನಾಗರಾಜು ಇತರರಿದ್ದರು.