ratna 
ಜಿಲ್ಲೆ

ಸೆ.೧೫ ರಿಂದ ದೇವದಾಸಿಯರ ಸಮೀಕ್ಷೆ ಪರ‍್ಣ ಮಾಹಿತಿ ಸಲ್ಲಿಸಲು ರತ್ನ ಮನವಿ

Raichur - Reporter - Rachhai Swamy

 ರಾಯಚೂರು ರಾಜ್ಯದ ೧೪ ಜಿಲ್ಲೆಗಳಲ್ಲಿ ವಿಮುಕ್ತ ದೇವದಾಸಿಯರಿದ್ದು, ಸೆ.೧೫ರಿಂದ ೪೫ ದಿನಗಳ ವರೆಗೆ ದೇವದಾಸಿ ಅಭಿವೃದ್ಧಿ ನಿಗಮದಿಂದ ದೇವದಾಸಿಯರ ಸಮೀಕ್ಷೆ ನಡೆಯಲಿದ್ದು, ದೇವದಾಸಿ ಪಟ್ಟಿಯಲ್ಲಿ ಕುಟುಂಬದ ಸಂಪರ‍್ಣ ವಿವಿರ ದಾಖಲಿಸುವಂತೆ ವಿಮುಕ್ತ ದೇವದಾಸಿ ಸಂಘದ ಜಿಲ್ಲಾ ಸಂಚಾಲಕಿ ರತ್ನ ಕಟ್ಟಿಮನಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ೧೦ ರ‍್ಷದಿಂದ ದೇವದಾಸಿ ಮಹಿಳೆಯರಿಗೆ ರ‍್ಕಾರದ ಸೌಲಭ್ಯ ನೀಡುವಲ್ಲಿ ಯಶಸ್ವಿಯಾಗಿದ್ದೇವೆ. ರಾಜ್ಯದ ಬೆಳಗಾವಿ, ಬಳ್ಳಾರಿ, ಕೊಪ್ಪಳ, ರಾಯಚೂರು, ಬೀದರ, ಶಿವಮೊಗ್ಗ ಸೇರಿ ಒಟ್ಟು ೧೪ ಜಿಲ್ಲೆಗಳಲ್ಲಿ ದೇವದಾಸಿ ಮಹಿಳೆಯರಿದ್ದು, ರಾಜ್ಯದಲ್ಲಿ ಸುಮಾರು ೪೦ ಸಾವಿರಕ್ಕೂ ಹೆಚ್ಚು ಕುಟುಂಬಗಳಿವೆ. ರಾಯಚೂರು ಜಿಲ್ಲೆಯಲ್ಲಿ ಸುಮಾರು ೩,೦೦೦ ಕುಟುಂಬಗಳಿದ್ದು, ಸಮಗ್ರ ದೇವದಾಸಿಯರ ಪುನರ್‌ವಸತಿ ಕಾಯ್ದೆಯ ಸೌಲಭ್ಯಗಳನ್ನು ನೈಜ ದೇವದಾಸಿಯರ ಕುಟುಂಬಗಳಿಗೆ ನೀಡಲು ಈ ಸಮೀಕ್ಷೆ ನಡೆಯಲಿದೆ ಎಂದರು.

ಸಮೀಕ್ಷೆಯೂ ದೇವದಾಸಿ ಅಭಿವೃದ್ದಿ ನಿಗಮ, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಅಧಿಕಾರಿಗಳು ಜಂಟಿಯಾಗಿ ನಡೆಸಲಿದ್ದು, ಆಯಾ ತಾಲೂಕು ಕಚೇರಿಗಳಲ್ಲಿ ಸಮೀಕ್ಷೆಯನ್ನು ನಡೆಸಲಾಗುತ್ತದೆ. ನೈಜ ದೇವದಾಸಿಯರು ತಮಗೆ ನಿಗಮದಿಂದ ನೀಡಲಾದ ದೃಢೀಕರಣ ಪತ್ರ, ತಮ್ಮ ಆಧಾರ ಕರ‍್ಡ್ ಹಾಗೂ ಮಕ್ಕಳ ಮತ್ತು ಮೊಮ್ಮಕ್ಕಳ ಆಧಾರ್ ಕರ‍್ಡ್ ಅನ್ನು ಸಲ್ಲಿಸಿ ಪಟ್ಟಿಯಲ್ಲಿ ಹೆಸರು ಸರ‍್ಪಡೆ ಮಾಡಿಕೊಳ್ಳಬೇಕು ಎಂದರು.

ಈ ಸಂರ‍್ಭದಲ್ಲಿ ಪ್ರಮುಖರಾದ ಎಂ.ಆರ್.ಭೇರಿ,ಹುಚ್ಚಾರೆಡ್ಡಿ, ಹುಲಿಗೆಮ್ಮ, ಮಲ್ಲಿಕರ‍್ಜುನ ಇದ್ದರು.