ಜಿಲ್ಲೆ

ದೇವರಗುಡಿಪಲ್ಲಿ ಬಳಿ ಪಡಿತರ ಗೋದಾಮು

ಎನ್.ವೆಂಕಟೇಶ್

ಬಾಗೇಪಲ್ಲಿ : ಪಡಿತರ ಆಹಾರ ಪದಾರ್ಥಗಳ ಸುಚಿತ್ವ ಕಾಪಾಡುವ ಉದ್ದೇಶಕ್ಕಾಗಿ ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯಿಂದ ದೇವರಗುಡಿಪಲ್ಲಿ ಗ್ರಾಮದ ಬಳಿಯ ಶಿವರಾಮರೆಡ್ಡಿ ಕಟ್ಟಡದಲ್ಲಿ ನೂತನ ಗೋದಾಮು ಪ್ರಾರಂಭಿಸಲಾಗುತ್ತಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ಬಾಗೇಪಲ್ಲಿ ಪಟ್ಟಣದ ಹೊರವಲಯದ ದೇವರಗುಡಿಪಲ್ಲಿ ಗ್ರಾಮದ ಬಳಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪಡಿತರ ಆಹಾರ ಪದಾರ್ಥಗಳ ದಾಸ್ತಾನು ಗೋದಾಮು ಉದ್ಘಾಟಿಸಿ ಮಾತನಾಡಿ, ಬಾಗೇಪಲ್ಲಿ ಪಟ್ಟಣದ ಗೂಳೂರು ರಸ್ತೆಯಲ್ಲಿರುವ ಪಡಿತರ ಪದಾರ್ಥಗಳ ದಾಸ್ತಾನು ಗೋದಾಮು ಶಿಥಿಲಗೊಂಡಿದ್ದು, ಶಿಥಿಲಗೊಂಡಿರುವ ಗೋದಾಮುನಲ್ಲಿ ಪಡಿತರ ಆಹಾರ ಪದಾರ್ಥಗಳ ದಾಸ್ತಾನು ಮಾಡುವುದರಿಂದ ಸುಚಿತ್ವ ಕಾಪಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಆಹಾರ ಇಲಾಖೆಯ ನೂತನ ಗೋದಾಮುನಿಂದ ತಾಲೂಕಿನ ಎಲ್ಲ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಪದಾರ್ಥಗಳನ್ನು ಸರಬರಾಜು ಮಾಡಲಾಗುತ್ತಿದ್ದು, ನ್ಯಾಯಬೆಲೆ ಅಂಗಡಿ ಮಾಲೀಕರು ಸಹಕರಿಸಬೇಕು ಎಂದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಿಲ್ಲಾ ವ್ಯವಸ್ಥಾಪಕ ವಿಜಯ ಕುಮಾರ್, ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ವಿ.ಪ್ರಭಾಕರರೆಡ್ಡಿ, ಮುಖಂಡರಾದ ಡಿ.ಎನ್.ಶಿವರಾಮರೆಡ್ಡಿ, ಮಲ್ಲಿಕಾರ್ಜುನರೆಡ್ಡಿ, ಡಿ.ಎಸ್.ಸುಪ್ರೀತ್, ಸುರೇಶ್, ಭರತ್‌ರೆಡ್ಡಿ, ಶ್ರೀನಿವಾಸರೆಡ್ಡಿ, ರಾಜಗೋಪಾಲರೆಡ್ಡಿ ಇದ್ದರು.