ಜಿಲ್ಲೆ

ರಾಘವೇಂದ್ರಸ್ವಾಮಿಗಳ ರಥೋತ್ಸವ

ಮುಂಡರಗಿ: ಪಟ್ಟಣದ ಬ್ರಾಹ್ಮಣರ ಬೀದಿಯಲ್ಲಿರುವ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 352ನೇ ಆರಾಧನಾ ಮಹೋತ್ಸವ ಅಂಗವಾಗಿ ಇತ್ತೀಚೆಗೆ ಉತ್ತರಾರಾಧನೆ ವಿಜೃಂಭಣಿಯಿಂದ ಆಚರಿಸಲಾಯಿತು.

ಮಠದಲ್ಲಿ ಅಷ್ಟೋತ್ತರ ಕಾರ್ಯಕ್ರಮ, ರಾಯರಿಗೆ ಪಂಚಾಮೃತ ಅಭಿಷೇಕ, ಪಂಡಿತರಿಂದ ಪ್ರವಚನ ಹಾಗೂ ರಥೋತ್ಸವ ಕಾರ್ಯಕ್ರಮಗಳು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆದವು. ರಾಘವೇಂದ್ರ ಸ್ವಾಮಿಗಳ ಭಾವಚಿತ್ರ ಮೆರವಣಿಗೆ ಜರುಗಿತು.

ನಂತರ ಪಾಲಕಿ ಸೇವಾ, ಮಹಾ ಮಂಗಳಾರತಿ ನೆರವೇರಿಸಲಾಯಿತು. ರಾಘವೇಂದ್ರ ಸ್ವಾಮಿಗಳ ಮಠದ ಅಧ್ಯಕ್ಷ ವಿ.ಎನ್. ಕೊಪ್ಪಳ, ಹಿರಿಯರಾದ ವಿ.ಎಲ್. ನಾಡಗೌಡ್ರ, ಜಿ.ಎಲ್. ನಾಡಗೌಡ, ಪ್ರಧಾನ ಅರ್ಚಕ ಸಂಜೀವಾಚಾರ್ಯ ಮುಂಡರಗಿ, ಕೆ.ಪಿ. ಗುಡಿ, ಕೆ.ಆರ್. ಸಾವುಕಾರ, ಗೋವಿಂದಭಟ್ ಜೋಶಿ, ಎಸ್.ಆರ್. ರಿತ್ತಿ, ಎಸ್.ಬಿ. ಜೋಶಿ, ಜಿ.ಎಂ. ಜೋಶಿ, ಸೇತುರಾಮಾಚಾರ್ಯ ಕಟ್ಟಿ, ಇತರರಿದ್ದರು.