ಜಿಲ್ಲೆ

ಲಕ್ಷ್ಮೀಜನಾರ್ಧನ ಸ್ವಾಮಿ ರಥೋತ್ಸವ ಸಂಪನ್ನ

reportermys

ಮಂಡ್ಯ: ನಗರದ ಪುರಾಣ ಪ್ರಸಿದ್ದ ಲಕ್ಷ್ಮೀ ಜನಾರ್ಧನಸ್ವಾಮಿ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ಮಧ್ಯಾಹ್ನ 1 ಗಂಟೆಗೆ ಸರಿಯಾಗಿ ಸ್ವಾಮಿಯವರನ್ನು ಭವ್ಯವಾಗಿ ಅಲಂಕರಿಸಿದ ರಥೋತ್ಸವದಲ್ಲಿ ಆರೋಹಿಸಿ ವೈಭವದಿಂದ ರಥೋತ್ಸವ ನಡೆಸಲಾಯಿತು. ಇದಕ್ಕೂ ಮೊದಲು ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಲಾಯಿತು.

ಬ್ರಹ್ಮ ರಥೋತ್ಸವದ ಅಂಗವಾಗಿ ಸಕಲ ವಿಧಿ ವಿಧಾನಗಳಿಂದ ಪೂಜೆ, ಪುನಸ್ಕಾರ, ಮಂತ್ರಾಧಿಗಳು, ಪಠಣ ಸೇರಿದಂತೆ ಧಾರ್ಮಿಕ ಕೈಂಕರ್ಯ ನಡೆಯಿತು. ಮಂಟಪ ಪೂಜೆ ನಂತರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸ್ವಾಮಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ವಿಧಿ ವಿಧಾನಗಳಿಂದ ಅರ್ಪಿಸಿ ನಂತರ ರಥೋತ್ಸವ ನಡೆಸಲಾಯಿತು. ಬಳಿಕ ಭಕ್ತರಿಗೆ ಹಾಲು, ಮಜ್ಜಿಗೆ, ಪಾನಕ, ಸಿಹಿತಿಂಡಿಗಳನ್ನು ವಿತರಣೆ ಮಾಡಲಾಯಿತು.