ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಾರ್ಷಿಕ ಜಾತ್ರೆ ಪ್ರಯುಕ್ತ ಕಳೆದ ವರ್ಷದ ರಥೋತ್ಸವ ಸಂಭ್ರಮ 
ಜಿಲ್ಲೆ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಿಷು ಜಾತ್ರೋತ್ಸವ

Santhosh Krishna K M

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಾರ್ಷಿಕ ವಿಷು ಜಾತ್ರೋತ್ಸವ ನಡೆಯುತ್ತಿದ್ದು, ಏ.22ರಂದು ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ಮಂಜುನಾಥ ಸ್ವಾಮಿಯ ಶ್ರೀಮನ್ಮಹಾರಥೋತ್ಸವ ನಡೆಯಲಿದೆ.

ಅಂದು ರಾತ್ರಿ ದೇವಸ್ಥಾನದ ಒಳಾಂಗಣದಲ್ಲಿ ವಿವಿಧ ವಾದ್ಯವಾದನಗಳ ಸುತ್ತುಬಲಿ ನಡೆಯಲಿದ್ದು, ಬಳಿಕ ರಥದಲ್ಲಿ ಮಂಜುನಾಥ ದೇವರ ಪ್ರತಿಷ್ಠಾಪನೆ ನಡೆಯಲಿದೆ. ರಥವು ಅಣ್ಣಪ್ಪ ಬೆಟ್ಟದ ಬುಡದ ತನಕ ತೆರಳಲಿದ್ದು, ಹಿಂದಿರುಗಿದ ಬಳಿಕ ಒಳಾಂಗಣದಲ್ಲಿ ವಸಂತ ಪೂಜೆ, ಅಷ್ಟಾವಧಾನ ಸೇವೆ ನಡೆಯುವ ಮೂಲಕ ಉತ್ಸವ ಸಮಾಪ್ತಿಗೊಳ್ಳಲಿದೆ. ಏ.21 ರಂದು ಗೌರಿಮಾರುಕಟ್ಟೆ ಉತ್ಸವ, ಚಂದ್ರಮಂಡಲ ರಥೋತ್ಸವ ನಡೆಯಲಿದ್ದು, 23ರಂದು ನೇತ್ರಾವತಿ ನದಿಯಲ್ಲಿ ದೇವರ ಅವಭೃತ ಸ್ನಾನ ಹಾಗೂ ಧ್ವಜಾವರೋಹಣದೊಂದಿಗೆ ವಾರ್ಷಿಕ ವಿಷು ಜಾತ್ರೆ ಸಂಪನ್ನಗೊಳ್ಳಲಿದೆ.