Rathi, Kavade School's opening ceremony  
ಜಿಲ್ಲೆ

ರಾಠಿ, ಕಾವಡೆ ಶಾಲೆಯಲ್ಲಿ ಆರಂಭೋತ್ಸವ

Vijayapura - Desk - Doddanagouda Gudihindin

ಗುಳೇದಗುಡ್ಡ: ಸ್ಥಳೀಯ ಪಿ.ಇ.ಟಿ.ಯ ರಾಠಿ ಮತ್ತು ಕಾವಡೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪುಷ್ಪ ನೀಡಿ ಸ್ವಾಗತಿಸುವುದರ ಮೂಲಕ ಪ್ರಾರಂಭೋತ್ಸವ ಆಚರಿಸಲಾಯಿತು.

ವರಶಂಕರ ಹಾಗೂ ಸರಸ್ವತಿ ಪೂಜೆ ಸಲ್ಲಿಸಲಾಯಿತು. ಶಿಕ್ಷಕ ಸಾಂತಪ್ಪ ಬಸವಂತಪ್ಪ ಗಾಜಿ ದಂಪತಿ ಪೂಜೆ ನೇರವೇರಿಸಿದರು. ಶಾಲೆಯನ್ನು ಹೂಗಳು, ಬಲೂನುಗಳು ಮತ್ತು ವಿವಿಧ ಪರಿಕರಗಳಿಂದ ಅಲಂಕರಿಸಲಾಗಿತ್ತು.

ಮಾಜಿ ಶಾಸಕ ರಾಜಶೇಖರ ಶೀಲವಂತ , ಶಾಲೆ ಚೇರ್ಮನ್ ಅಶೋಕ ಹೆಗಡಿ ಹಾಗೂ ಸದಸ್ಯ ವಿಠ್ಠಲಸಾ ಕಾವಡೆ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಮುಖ್ಯಶಿಕ್ಷಕ ಆರ್.ಎಸ್. ಜಿರ್ಲಿ, ವೀಣಾ ಹಳ್ಳೂರ, ಪಿಇಟಿಯ ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ, ಸಂಸ್ಥೆಯ ನಿರ್ದೇಶಕ ಆರ್.ಆರ್. ರಾಠಿ, ಜಗದೀಶ ಸೋನಿ, ಶ್ಯಾಮಸುಂದರ ಮಾಲಪಾಣಿ, ಎ.ಡಿ. ಕೊಪ್ಪಳ, ಬಿ.ಎಂ. ತಾಪಡಿಯಾ ಇದ್ದರು.