ಜಿಲ್ಲೆ

ಕೋಲಾರದಲ್ಲಿ ರಥಸಪ್ತಮಿ ಅಂಗವಾಗಿ ಸೂರ್ಯದೇವನಿಗೆ 108 ನಮಸ್ಕಾರ

Kolar

ಕೋಲಾರ: ನಗರದ ಕೋಲಾರಮ್ಮ, ಸೋಮೇಶ್ವರ ಸ್ವಾಮಿ ದೇವಾಲಯಗಳ ಆವರಣದಲ್ಲಿ ವಿವೇಕಾನಂದ ಯೋಗ ಚಾರಿಟಬಲ್ ಟ್ರಸ್ಟ್ ಹಾಗೂ ಪತಂಜಲಿ ಯೋಗ ಸಮಿತಿಯಿಂದ ರಥಸಪ್ತಮಿ ಅಂಗವಾಗಿ ಶನಿವಾರ 108 ಸೂರ್ಯ ನಮಸ್ಕಾರಗಳನ್ನು ಅರ್ಪಿಸಲಾಯಿತು.

ಮುಂಜಾನೆ 5 ಗಂಟೆಯಿಂದಲೇ ನಗರದೇವತೆ ಕೋಲಾರಮ್ಮ ದೇಗುಲದಲ್ಲಿ ವಿವೇಕಾನಂದ ಯೋಗ ಚಾರಿಟೆಬಲ್ ಟ್ರಸ್ಟ್‌ನ ನೂರಾರು ಯೋಗ ಪಟುಗಳು ಯೋಗಾಭ್ಯಾಸ ಹಾಗೂ ಸೂರ್ಯದೇವನಿಗೆ 108 ನಮಸ್ಕಾರ ಅರ್ಪಿಸಿದರು. ಯೋಗ ಗುರು ಎನ್.ನಾಗರಾಜ್ ಯೋಗದ ವಿವಿಧ ಆಸನಗಳ ಕುರಿತು ತಿಳಿಸಿಕೊಟ್ಟರು.

ಪತಂಜಲಿ ಯೋಗ ಸಮಿತಿಯಿಂದ ನಗರದ ಸೋಮೇಶ್ವರಸ್ವಾಮಿ ದೇವಾಲಯದಲ್ಲಿ ಯೋಗ ಸಮಿತಿಯ 200ಕ್ಕೂ ಹೆಚ್ಚು ಕಾರ್ಯಕರ್ತರು ಬೆಳಗ್ಗೆ 5 ಗಂಟೆಗೆ ಸೂರ್ಯದೇವನಿಗೆ ನಮಸ್ಕಾರ ಸಲ್ಲಿಸಿದರು.

ನಂತರ ದೇವಾಲಯದಿಂದ ಬೃಹತ್ ಶೋಭಾಯಾತ್ರೆಯಲ್ಲಿ ತೆರಳಿ ನಗರದ ಕುರುಬರಪೇಟೆ, ಗೌರಿಪೇಟೆ, ಕಠಾರಿಪಾಳ್ಯ ಮುಖ್ಯರಸ್ತೆ, ಡೂಂ ಲೈಟ್ ವೃತ್ತ, ಬಂಗಾರಪೇಟೆ ವೃತ್ತಗಳಲ್ಲಿ ಹಾದು ಯೋಗದ ಮಹತ್ವವನ್ನು ತಿಳಿಸುವ ಮೂಲಕ ಆರೋಗ್ಯಕ್ಕಾಗಿ ಯೋಗಾಭ್ಯಾಸ ಮಾಡುವಂತೆ ನಾಗರೀಕರಲ್ಲಿ ಅರಿವು ಮೂಡಿಸುವ ಯತ್ನ ನಡೆಸಲಾಯಿತು.

ಸಮಿತಿ ಗೌರವಾಧ್ಯಕ್ಷ ನಂಜುಂಡಯ್ಯಶ್ರೇಷ್ಟಿಗಳು, ಉಪಾಧ್ಯಕ್ಷ ಡಾ.ಜನಾದರ್ನ್, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಸೇರಿ ಯೋಗ ಶಿಕ್ಷಣಾರ್ಥಿಗಳು ಭಾಗವಹಿಸಿದ್ದರು. ಪತ್ರಕರ್ತ ಕೆ.ಪ್ರಹ್ಲಾದರಾವ್, ವೆಂಕಟೇಶ್, ರಘು, ಬಾಬು,ಅಪ್ಪಿ, ಸುರೇಶ್, ಮಂಜುಳಾ, ಯೋಗ ಶಿಕ್ಷಕರಾದ ಚಂದ್ರಣ್ಣ, ರವಿ, ಕೃಷ್ಣಮೂರ್ತಿ, ಮಂಜುಳಮ್ಮ, ವಿಜಯಮ್ಮ ಮತ್ತಿತರರು ಭಾಗವಹಿಸಿದ್ದರು.

ಕೋಲಾರದ ಹಾರೋಹಳ್ಳಿ ಮುಖ್ಯ ರಸ್ತೆಯ ಮಹರ್ಷಿ ಯೋಗ ಮಂದಿರದಿಂದ ನಗರದ ಗೋಕುಲ ಕಾಲೇಜು ಮೈದಾನದಲ್ಲಿ ಮುಖ್ಯ ಯೋಗಶಿಕ್ಷಕ ಜಯಪ್ರಕಾಶ್ ಮುಂದಾಳತ್ವದಲ್ಲಿ ಸೂರ್ಯ ನಮಸ್ಕಾರ ಮಾಡಲಾಯಿತು.