ಕಾರವಾರ: ಚುನಾವಣೆ ಪ್ರಚಾರ ಕ್ಕೆ ಜಿಲ್ಲಾಡಳಿತ ರೇಟ್ ಪಿಕ್ಸ್ ಮಾಡಿದೆ. ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು ಗರಿಷ್ಠ 40 ಲಕ್ಷ ಖರ್ಚು ಮಾಡಬಹುದು ಎಂಬ ಮಿತಿ ಹೇರಲಾಗಿದೆ. ಅವರು ನಾಮಪತ್ರ ಸಲ್ಲಿಸಿದ ದಿನದಿಂದ ಖರ್ಚಿನ ಮೀಟರ್ ಪ್ರಾರಂಭವಾಗಲಿದೆ.
ಆದರೆ, ಕೋಟ್ಯಂತರ ರೂ. ಖರ್ಚು ಮಾಡುವ ಅಭ್ಯರ್ಥಿಗಳು ಅಧಿಕಾರಿಗಳ ದಿಕ್ಕು ತಪ್ಪಿಸಲು ರಾಮನ ಲೆಕ್ಕ, ಕೃಷ್ಣನ ಲೆಕ್ಕ ಪ್ರತ್ಯೇಕ ಬರೆದು ಚುನಾವಣಾಧಿಕಾರಿಗಳಿಗೆ ಹಾಜರು ಮಾಡುವ ಸಾಧ್ಯತೆ ಇದೆ. ಇದರಿಂದ ಜಿಲ್ಲಾಡಳಿತ ಪಕ್ಷಗಳ ಅಭಿಪ್ರಾಯ ಪಡೆದು ತನ್ನದೇ ಆದ ದರ ಪಟ್ಟಿ ನಿಗದಿ ಮಾಡಿದೆ.
ವಸ್ತುಗಳಿಂದ ಹಿಡಿದು ಕಲಾವಿದರ ಪ್ರದರ್ಶನದವರೆಗೆ ಒಟ್ಟು 67 ವಿವಿಧ ವಸ್ತು ಹಾಗೂ ಸೇವೆಗಳ ಬಾಡಿಗೆ ಅಥವಾ ಖರೀದಿ ಬೆಲೆಯನ್ನು ನಿಗದಿ ಮಾಡಲಾಗಿದೆ. ಜಿಲ್ಲೆಯ ಎಲ್ಲ ಆರೂ ಕ್ಷೇತ್ರಗಳಲ್ಲಿ ಇದೇ ಬೆಲೆ ಇರಲಿದೆ.
ಪ್ರಚಾರ ಮೈಕ್‌ಗೆ ದಿನಕ್ಕೆ 2 ಸಾವಿರ ರೇಟ್ ಕಾರ್ಡ್ ವೇದಿಕೆಗೆ ಅಳತೆಯ ಆಧಾರದ ಮೇಲೆ 650 ರಿಂದ 1200 ರೂ., ಬಟ್ಟೆ ಬ್ಯಾನರ್ (4ಗಿ2) 400 ರೂ. ಎ4 ಅಳತೆಯ ಕರ ಪತ್ರ 1 ಸಾವಿರ ಪ್ರತಿಗಳಿಗೆ 900 ರೂ. ಸಿಂಗಲ್ ಕಲರ್ ಪೋಸ್ಟರ್ 1 ಸಾವಿರ ಕಾಪಿಗೆ 2200 ರೂ.,
ಮಲ್ಟಿ ಕಲರ್‌ಗೆ 6500 ರೂ, ಪ್ರತಿ ಖುರ್ಚಿಗೆ ದಿನಕ್ಕೆ 5 ರೂ., ಮೂರು ಜನ ಕೂರುವ ಸೋಾಕ್ಕೆ 600 ರೂ., ಪೇಪರ್ ಕ್ಯಾಪ್‌ಗಳಿಗೆ ಒಂದಕ್ಕೆ 15 ರೂ., ಮುದ್ರಿತ ಟಿ.ಶರ್ಟ್‌ಗಳಿಗೆ 150 ರೂ., 40ಗಿ20 ಅಳತೆಯ ಸಾಮಾನ್ಯ ಶಾಮಿಯಾನಾಕ್ಕೆ 2 ಸಾವಿರ ರೂ.,
ಇನೋವಾ ಕಾರಿಗೆ ಪ್ರತಿ ಕಿಮೀಗೆ 18 ಸಾವಿರ ರೂ., ವಿಂಗರ್‌ಗೆ ಪ್ರತಿದಿನಕ್ಕೆ 3 ಸಾವಿರ ರೂ. ಬಾಡಿಗೆ ನಿಗದಿ ಮಾಡಲಾಗಿದೆ.
ಪುಲಾವ್‌ಗೆ 40 ರೂ., ವೆಜ್ ಬಿರಿಯಾನಿಗೆ 80 ರೂ. ಚಿಕನ್ ಬಿರಿಯಾನಿಗೆ 130 ರೂ., ಪ್ರತಿ ಚಹಾಕ್ಕೆ 10, ಸ್ನಾೃಕ್ಸ್‌ಗೆ 20 ರೂ. ನಿಗದಿ ಮಾಡಲಾಗಿದೆ.
ಪ್ರಚಾರ ಪ್ರತಿ ಅಭ್ಯರ್ಥಿಯ ರೇಟ್ ಕಾರ್ಡ್ ಪ್ರಚಾರ ಓಡಾಟದ ಜತೆಗೆ ಆಯೋಗದಿಂದಲೇ ವಿಡಿಯೋಗ್ರಾರ್ ತಂಡ ಕಳಿಸಲಾಗಿದೆ. ತಂಡ ಸಂಗ್ರಹಿಸಿದ ವಿಡಿಯೋಗಳನ್ನು ಆಯಾ ಕ್ಷೇತ್ರದಲ್ಲಿರುವ ಪ್ರತ್ಯೇಕ ತಂಡವು ವೀಕ್ಷಣೆ ಮಾಡಲಿದೆ.
ಅಭ್ಯರ್ಥಿಗಳ ಅಂದಾಜು ಖರ್ಚಿನ ಲೆಕ್ಕ ಹಾಕಲಿದೆ. ಈ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ಅಭ್ಯರ್ಥಿಗಳು ನಾಲ್ಕು ಹಂತದಲ್ಲಿ ತಮ್ಮ ಖರ್ಚಿನ ವಿವರವನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು.
ಕಾರವಾರ, ಹಳಿಯಾಳ ಕ್ಷೇತ್ರದ ಲೆಕ್ಕ ವೀಕ್ಷಕ ಭರತ ಅಂಧಾಳೆ ಅವರು ಮಂಗಳವಾರ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು ಹಾಗೂ ಅವರ ಪರ ಏಜೆಂಟರ ಸಭೆ ನಡೆಸಿದರು. ಪ್ರತಿ ಅಭ್ಯರ್ಥಿ ಚುನಾವಣೆ ಖರ್ಚುಗಳನ್ನು ನಿಭಾಯಿಸಲು ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯಬೇಕು.
10 ಸಾವಿರ ರೂ.ಗಿಂತ ಹೆಚ್ಚು ಮೊತ್ತದ ವಸ್ತುಗಳನ್ನು ಒಬ್ಬನಿಂದ ಖರೀದಿಸುವುದಾದಲ್ಲಿ ಚೆಕ್ ಮೂಲಕವೇ ಪಾವತಿ ಮಾಡಬೇಕು ಎಂದು ಸೂಚನೆ ನೀಡಿದರು. ಎಸಿ ಜಯಲಕ್ಷ್ಮೀ ರಾಯಕೋಡ ಇದ್ದರು.
ಅಭ್ಯರ್ಥಿ 40 ಲಕ್ಷ ರೂ.ಗಿಂತ ಹೆಚ್ಚು ಖರ್ಚು ಮಾಡಿದ್ದು ಕಂಡುಬಂದಲ್ಲಿ ಆತನ ಆಯ್ಕೆ ರದ್ದಾಗಲಿದೆ. ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಪಕ್ಷೇತರ ಅಭ್ಯರ್ಥಿಯ ಹೆಸರಿನಲ್ಲಿ ವಾಹನಗಳ ಅನುಮತಿ ಪಡೆದು ಓಡಾಡುವುದು ಪತ್ತೆಯಾದಲ್ಲಿ ಅಂಥವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಪ್ರತಿ ಹಂತದಲ್ಲೂ ತಂಡಗಳು ನಿಗಾ ಇಡಲಿವೆ. ದೂರುಗಳಿದ್ದರೆ ನೀಡಬಹುದಾಗಿದೆ.ಭರತ ಅಂಧಾಳೆ, ಕಾರವಾರ, ಹಳಿಯಾಳ ಕ್ಷೇತ್ರದ ಚುನಾವಣಾ ಲೆಕ್ಕ ವೀಕ್ಷಕ ಸ್ಟಾರ್ ಪ್ರಚಾರ ಕರನ್ನು ಕರೆಸಿದ ಸಂದರ್ಭದಲ್ಲಿ ಅವರು ಒಬ್ಬ ಅಭ್ಯರ್ಥಿಯ ಹೆಸರು ಹೇಳಿದರೆ ಎಲ್ಲ ಖರ್ಚನ್ನೂ ಒಬ್ಬನಿಗೇ ವಹಿಸಲಾಗುವುದು. ಸ್ಟಾರ್ ಪ್ರಚಾರ ಕರು ಹಲವು ಅಭ್ಯರ್ಥಿಗಳ ಹೆಸರು ಹೇಳಿದಲ್ಲಿ ಖರ್ಚನ್ನು ಸಮನಾಗಿ ಹಂಚಲಾಗುವುದು.ಜಯಲಕ್ಷ್ಮೀ ರಾಯಕೋಡ, ಚುನಾವಣಾಧಿಕಾರಿ, ಕಾರವಾರ ವಿಧಾನಸಭಾ ಕ್ಷೇತ್ರ