ಜಿಲ್ಲೆ

ರಾಸುಗಳು ರೈತರ ಜೀವನನಾಡಿ, ಮಾಜಿ ಸಚಿವ ಎಂಟಿಬಿ ನಾಗರಾಜ್ ಅಭಿಮತ, ಜಾನುವಾರುಗಳಿಗೆ ಮೇವು ವಿತರಣೆ

Bengaluru Rural

ಹೊಸಕೋಟೆ: ರೈತನ ಜೀವನಾಡಿಯಾಗಿರುವ ರಾಸುಗಳಿಗೆ 25 ವರ್ಷದಿಂದ ಮೇವು ಹಾಗೂ ಬಹುಮಾನ ವಿತರಿಸುತ್ತಿರುವುದು ಶ್ಲಾಘನೀಯ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಮಕರ ಸಂಕ್ರಾಂತಿ ಪ್ರಯುಕ್ತ ತಾಲೂಕಿನ ಸುಮಾರು 2500 ಹಸುಗಳಿಗೆ ಮೇವು, ರಾಸುಗಳಿಗೆ ಬಹುಮಾನ ವಿತರಣೆ ಹಾಗೂ ್ಯಾಷನ್ ಶೋ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೇರೆ ಕಡೆ ರಾಸುಗಳಿಗೆ ಬಹುಮಾನ ವಿತರಿಸುವ ಕಾರ್ಯಕ್ರಮ ನಾನು ನೋಡಿಲ್ಲ. ಆದರೆ ಜಯರಾಜ್ ಅವರು ಮಾಡುತ್ತಿರುವ ಈ ಕಾರ್ಯ ಉತ್ತಮ ಬೆಳೆವಣಿಗೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಜನರಿಗೆ ಅನುಕೂಲ ಮಾಡುವ ಶಕ್ತಿ ದೇವರು ಅವರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಬಿಜೆಪಿ ನಗರಾಧ್ಯಕ್ಷ ಡಾ.ಸಿ. ಜಯರಾಜ್ ಮಾತನಾಡಿ, ತಾಯಿ ಹಸುವನ್ನು ಮಾಲೀಕ ಮಾರಿದಾಗ ಅದರ ಕರು ಅನುಭವಿಸುವ ನೋವಿನ ವೇದನೆ ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರಿದ್ದರಿಂದ ಹಸುಗಳಿಗೆ ಮೇವು ವಿತರಣೆ ಮಾಡುತ್ತಿರುವೆ. ಅಲ್ಲದೆ, ಮಕ್ಕಳು ತಾಯಿ ಹಾಲನ್ನು ಕೆಲ ವರ್ಷ ಮಾತ್ರ ಸೇವಿಸುತ್ತಾರೆ. ಆದರೆ ಹಸು ನೀಡುವ ಹಾಲನ್ನು ವಿವಿಧ ರೂಪದಲ್ಲಿ ಪ್ರತಿಯೊಬ್ಬರೂ ಜೀವನಪೂರ್ತಿ ಉಪಯೋಗಿಸುತ್ತಾರೆ. ಆದ್ದರಿಂದ ದೇಶದಲ್ಲಿ ತಾಯಿಯ ಸ್ಥಾನ ನೀಡಿ ಅವುಗಳನ್ನು ಗೌರವಿಸಬೇಕು ಎಂದರು.

ಹಬ್ಬದ ನಿಮಿತ್ತ ತಾಲೂಕಿನ ವಿವಿಧ ಭಾಗದಿಂದ ಸುಮಾರು 2500 ಹಸುಗಳು ಭಾಗವಹಿಸಿದ್ದವು. ಚನ್ನಬೈರೇಗೌಡ ಕ್ರೀಡಾಂಗಣದ ಮುಂಭಾಗ ಇರುವ ನಾಗರ ಹುತ್ತಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ರೈತರಿಗೆ ಪ್ರತಿ ಹಸುವಿಗೆ ಒಂದು ಮೂಟೆ ಆಹಾರ ವಿತರಿಸಲಾಯಿತು. ಉತ್ತಮ ಹಾಲು ನೀಡುವ ಸುಮಾರು 10 ಹಸು ಹಾಗೂ 5 ಜೊತೆ ಎತ್ತುಗಳಿಗೆ ್ಯಾಷನ್ ಶೋ ನಡೆಯಿತು. ಸ್ಪರ್ಧೆಯಲ್ಲಿ ಮೂರು ಹಸು ಹಾಗೂ ಮೂರು ಜತೆ ಎತ್ತುಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ನಗರಸಭೆ ಸದಸ್ಯ ರವಿ, ಮುಖಂಡರಾದ ಕೆಂಪಣ್ಣ, ಪ್ರವೀಣ್, ನವತೇಜ, ಶ್ರೀನಿವಾಸ್, ಉಮೇಶ್, ರವಿ, ನಾಗರಾಜ್, ಹರಿ, ನಾರಾಯಣ್, ಸಿ ಮಂಜುನಾಥ್ ಇತರರು ಇದ್ದರು.