ಜಿಲ್ಲೆ

ರಾಷ್ಟ್ರೋತ್ಥಾನ ವಿದ್ಯಾಲಯಕ್ಕೆ ರಶ್ಮಿ ಪ್ರಥಮ

ವಿಜಯವಾಣಿ ಸುದ್ದಿಜಾಲ ಧಾರವಾಡ

ತಾಲೂಕಿನ ಮುಮ್ಮಿಗಟ್ಟಿಯ ರಾಷ್ಟ್ರೋತ್ಥಾನ ವಿದ್ಯಾಲಯದ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದಿದ್ದಾರೆ. ರಶ್ಮಿ ಮರಿತಮ್ಮನವರ ಪ್ರಥಮ, ಸಂಜೀತಾ ಕಲಳಗಾರ ಶೇ. 93.28 ದ್ವಿತೀಯ, ಮಂಜುಳಾ ದೇಶನೂರ ಶೇ. 93.12 ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾಳೆ. ದರ್ಶನ್ ಬಳಿಗಾರ ಶೇ. 92.32, ಪಾರ್ವತಿ ದಾನಗೌಡರ ಶೇ. 92.16, ಸಂಗೀತಾ ಎಂ.ಎ. ಶೇ. 92.16, ಅಕ್ಷತಾ ಕಲ್ಲಯ್ಯನವರ ಶೇ. 92, ನಿವೇದಿತಾ ಫಕ್ಕೀರಪ್ಪನವರ ಶೇ. 92, ಸ್ಫೂರ್ತಿ ಕಮ್ಮಾರ ಶೇ. 91.84, ಭರತ್ ಗಾಣಿಗೇರ ಶೇ. 91.36, ಕೃತಿ ಕರಡಿಗುಡ್ಡ ಶೇ. 91.04, ಶಂಕರಗೌಡ ಪಾಟೀಲ ಶೇ. 90.72 ಅಂಕ ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.