ಜಿಲ್ಲೆ

ಹಂಪಿಯಲ್ಲಿ ಅಪರೂಪದ ಬಿಳಿ ಬಣ್ಣದ ಹಾವು ಪತ್ತೆ

Vijayanagara - Veerendra

ಹೊಸಪೇಟೆ:ಇಲ್ಲಿನ ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಅಪರೂಪದ ಸಾಮಾನ್ಯ ಬಿಳಿ ಮಣ್ಣು ಮುಕ್ಕ ಹಾವು ಪತ್ತೆಯಾಗಿದ್ದು, ಕಮಲಾಪುರದ ಉರಗ ತಜ್ಞ ಮಲ್ಲಿಕಾರ್ಜುನ ಜಿ.ಬಿ. ರಕ್ಷಿಸಿದರು.

ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ದೇವಸ್ಥಾನದ ಹೆಬ್ಭಾಗಿಲು ಬಳಿ ನಿದಾನವಾಗಿ ತೆವಳುತ್ತಿದ್ದ ಹಾವು ಕಂಡು ಪ್ರವಾಸಿಗರು ಬೆಚ್ಚಿ ಬಿದ್ದಿದ್ದರು. ಕೆಲವರು ಕುತೂಹಲದಿಂದ ತಮ್ಮ ಮೊಬೈಲ್ ಮತ್ತು ಕ್ಯಾಮರಾಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಇದನ್ನು ಗಮನಿಸಿ ದ ಸ್ಥಳೀಯ ಭದ್ರತಾ ಸಿಬ್ಬಂದಿಯ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಕಮಲಾಪುರ ಸ್ನೇಕ್ ಮಲ್ಲಿಕಾರ್ಜುನ್‌ಗೆ ಹಾವನ್ನು ಸುರಕ್ಷಿತವಾಗಿ ಸೆರೆಹಿಡಿದು, ಸಮೀಪದ ಅರಣ್ಯ ಪ್ರದೇಶದಲ್ಲಿ ಬಿಟ್ಟರು.

ಈ ಕುರಿತು ಪ್ರತಿಕ್ರಿಯಿಸಿದ ಸ್ನೇಕ್ ಮಲ್ಲಿಕಾರ್ಜುನ್, `ರೆಡ್ ಸ್ಯಾಂಡ್ ಬೋವಾ ಆಲ್ಬಿನೋ' ಎಂಬುದು ಇದರ ವೈಜ್ಞಾನಿಕ ಹೆಸರು. ಹಾವಿನ ದೇಹದಲ್ಲಿ ಮೆಲಾಲಿನ್ ಅಥವಾ ಪಿಗ್ಮೆಂಟ್ ಎಂಬ ದ್ರವ್ಯದ ಕೊರತೆಯಿಂ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಇದೊಂದು ಬಗೆಯ ಚರ್ಮ ರೋಗವಿದ್ದಂತೆ. ಆದರೆ, ಇಂತಹ ಹಾವುಗಳು ಕಾಣಸಿಗುವುದು ಅಪರೂಪ ಎಂದು ಹೇಳಿದರು.