ಜಿಲ್ಲೆ

ಗುಂಡ್ಲುಪೇಟೆಯಲ್ಲಿ ಚೆಸ್ ಟೂರ್ನಿ: ಮಂಡ್ಯ ರಾಯಲ್ ಚೆಸ್ ಅಕಾಡೆಮಿ ವಿದ್ಯಾರ್ಥಿಗಳ ಕಮಾಲ್

ಮಂಡ್ಯ: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ಇತ್ತೀಚೆಗೆ ನಡೆದ ಎಚ್.ಎಸ್.ಮಹದೇವಪ್ರಸಾದ್ ಚೆಸ್ ಟೂರ್ನಿಯಲ್ಲಿ ಮಂಡ್ಯ ರಾಯಲ್ ಚೆಸ್ ಅಕಾಡೆಮಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಚಾಮರಾಜನಗರ ಜಿಲ್ಲಾ ಚದುರಂಗ ಸಂಸ್ಥೆ ಹಾಗೂ ಗುಂಡ್ಲುಪೇಟೆ ಚೆಸ್ ಕ್ಲಬ್ ಸಹಯೋಗದಲ್ಲಿ ಜವಹರ್ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ 17 ವರ್ಷದವರೆಗಿನ ರ‌್ಯಾಪಿಡ್ ಚೆಸ್ ಪಂದ್ಯಾವಳಿಯ ಬಾಲಕಿಯರ ವಿಭಾಗದಲ್ಲಿ ಎಂ.ಎಚ್.ಯದ್ವಿತಿ(ಪಂದ್ಯಾವಳಿಯ ಚಾಂಪಿಯನ್ ಮತ್ತು 13 ವರ್ಷದೊಳಗಿನವರ ವಿಭಾಗದಲ್ಲಿ ಪ್ರಥಮ), ಎಂ.ಎಸ್.ಜ್ಞಾನವಿ(13 ವರ್ಷದೊಳಗಿನವರ ವಿಭಾಗದಲ್ಲಿ ದ್ವಿತೀಯ), ಎಚ್.ಯು.ಉನ್ನತಿ(11 ವರ್ಷದೊಳಗಿನ ವಿಭಾಗದಲ್ಲಿ ಪ್ರಥಮ), ನಿಹಾರಿಕ(9 ವರ್ಷದೊಳಗಿನ ವಿಭಾಗದಲ್ಲಿ ಪ್ರಥಮ) ಮತ್ತು ಕವನಾ(11 ವರ್ಷದೊಳಗಿನ ವಿಭಾಗದಲ್ಲಿ ದ್ವಿತೀಯ) ಸ್ಥಾನ ಪಡೆದಿದ್ದಾರೆ.

ಬಾಲಕರ ವಿಭಾಗದಲ್ಲಿ ಸಿ.ಚಿರಾಗ್(11 ವರ್ಷದೊಳಗಿನವರ ವಿಭಾಗದಲ್ಲಿ ದ್ವಿತೀಯ), ಎ.ಬಲ್ವಿತ್‌ಗೌಡ(13 ವರ್ಷದೊಳಗಿನವರ ವಿಭಾಗದಲ್ಲಿ ದ್ವಿತೀಯ), ಎಂ.ಕವಿಲ್(9 ವರ್ಷದೊಳಗಿನವರ ವಿಭಾಗದಲ್ಲಿ ತೃತೀಯ), ಎಂ.ಬ್ರಿಜೇಶ್(15 ವರ್ಷದೊಳಗಿನವರ ವಿಭಾಗದಲ್ಲಿ ನಾಲ್ಕನೇ), ಜಿಷ್ಣು(13 ವರ್ಷದೊಳಗಿನವರ ವಿಭಾಗದಲ್ಲಿ ನಾಲ್ಕು) ಮತ್ತು ಸಾಗರ್(13 ವರ್ಷದೊಳಗಿನವರ ವಿಭಾಗದಲ್ಲಿ ಐದನೇ) ಸ್ಥಾನ ಗಳಿಸಿದ್ದಾರೆ.

ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು. ಮಂಡ್ಯ ರಾಯಲ್ ಚೆಸ್ ಅಕಾಡೆಮಿ ಕಾರ್ಯದರ್ಶಿ ಎಂ.ಎಸ್.ಚೇತನ್ ಇದ್ದರು.