ಜಿಲ್ಲೆ

ಅತ್ಯಾಚಾರ ಎಸಗಿ ವೀಡಿಯೊ ಮಾಡಿಕೊಂಡ ಆರೋಪಿ ವಿರುದ್ಧ ದೂರು

Haveri - Kariyappa Aralikatti

ಸವಣೂರ: ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಅದನ್ನು ವೀಡಿಯೊ ರೇಕಾರ್ಡ್​ ಮಾಡಿಕೊಂಡು ಬೇದರಿಕೆ ಹಾಕುತ್ತಿದ್ದ ಆರೋಪಿ ವಿರುದ್ಧ ಇಲ್ಲಿಯ ಸವಣೂರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕಿನ ಕಡಕೋಳ ಗ್ರಾಮದ ಮಾಲತೇಶ ಗುಡ್ಡಪ್ಪ ರಿತ್ತಿ (38) ಎಂಬುವನ ವಿರುದ್ಧ ಪ್ರಕರಣ ದಾಖಲಾಗಿರುವುದು.

ಈತ ಮಹಿಳೆಯೊಬ್ಬಳಿಗೆ ಮೂರ್ಚೆ ಬರುವ ಔಷಧ ನೀಡಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ ಅದನ್ನು ವೀಡಿಯೊ ಮಾಡಿಕೊಂಡು ಮಹಿಳೆಗೆ ತೋರಿಸಿ ನಾನು ಹೇಳಿದಂತೆ ಕೇಳದಿದ್ದರೆ, ಇದನ್ನು ಫೆಸ್​ಬುಕ್​ ಮತ್ತು ವಾಟ್ಸ್​ಅಪ್​ನಲ್ಲಿ ಹರಿಬಿಡುತ್ತೇನೆ ಎಂದು ಹೆದರಿಸಿ ನಿರಂತರವಾಗಿ ಆಕೆಯ ಮೇಲೆ ಅತ್ಯಾಚಾರ ಎಸಗುತ್ತ ಬಂದಿದ್ದಾನೆ ಎಂದು ನೊಂದ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.