ಮಂಗಳೂರು: ನಿಜವಾದ ಹೆಸರನ್ನು ಮರೆ ಮಾಚಿ, ಪ್ರೀತಿಯ ನಾಟಕವಾಡಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಬೆದರಿಕೆ ಹಾಕಿದ ಕಿನ್ನಿಗೋಳಿಯ ಇಬ್ರಾಹಿಂ ಎಂಬಾತನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಬೈಕಂಪಾಡಿಯ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇಬ್ರಾಹಿಂ ತನ್ನ ಅಂಗಡಿಗೆ ಮೊಬೈಲ್ ಸಿಮ್ ಖರೀದಿಗೆ ಬಂದಿದ್ದ ಬಾಲಕಿಯನ್ನು ಪರಿಚಯ ಮಾಡಿಕೊಂಡು ಬಳಿಕ ಮೊಬೈಲ್ ಮೂಲಕ ಸಂಪರ್ಕ ಮಾಡುತ್ತಿದ್ದ. ತನ್ನ ನಿಜವಾದ ಹೆಸರನ್ನು ಮರೆ ಮಾಚಿ ತಾನು ಹಿಂದು ಧರ್ಮಕ್ಕೆ ಸೇರಿದವನೆಂದು ಹೇಳಿ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದ. ಆಕೆಯೊಂದಿಗೆ ಸ್ನೇಹ ಸಂಪಾದಿಸಿ ಮದುವೆಯಾಗುವುದಾಗಿ ನಂಬಿಸಿ, ಅಗಸ್ಟ್‌ನಲ್ಲಿ ಲಾಡ್ಜ್‌ಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಈ ವಿಷಯವನ್ನು ಯಾರಲ್ಲಾದರೂ ಹೇಳಿದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಲವ್ ಜಿಹಾದ್: ಆರೋಪಿ ಸುಳ್ಳು ಹೇಳಿ ಬಾಲಕಿಯನ್ನು ನಂಬಿಸಿ, ಪ್ರೀತಿಯ ನಾಟಕವಾಡಿ ಅತ್ಯಾಚಾರ ಎಸಗಿ ಮತಾಂತರವಾದರೆ ಮಾತ್ರ ಮದುವೆಯಾಗುವುದಾಗಿ ಬ್ಲಾೃಕ್‌ಮೇಲ್ ಮಾಡಿ ಲವ್‌ಜಿಹಾದ್ ಮಾಡಲು ಯತ್ನಿಸಲಾಗಿದೆ. ಆರೋಪಿಯನ್ನು ತಕ್ಷಣ ಬಂಧಿಸಬೇಕು ಎಂದು ಹಿಂದೂ ಸಂಘಟನೆ ಕಾರ್ಯಕರ್ತರು ಠಾಣೆಗೆ ತೆರಳಿ ಒತ್ತಾಯಿಸಿದ್ದರು. ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.