ಜಿಲ್ಲೆ

ಮೂಗಿ ಬಾಲಕಿಯ ಅತ್ಯಾಚಾರ ಯತ್ನಆರೋಪಿಯ ಬಂಧಿಸಿದ ಪೊಲೀಸರು

Dakshina Kannada

ಉಳ್ಳಾಲ: ಕೊಣಾಜೆ ಠಾಣಾ ವ್ಯಾಪ್ತಿಯ ಕೈರಂಗಳ ಗ್ರಾಮದಲ್ಲಿ ಅಪ್ರಾಪ್ತ ವಯಸ್ಸಿನ ಅಂಗವಿಕಲ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಭಾನುವಾರ ನಡೆದಿದ್ದು, ಆರೋಪಿ ಹೂಹಾಕುವಕಲ್ಲು ಕುಕ್ಕುದಕಟ್ಟೆ ನಿವಾಸಿ ಸಿದ್ದೀಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಪ್ರತಿದಿನ ಬಾಲಕಿಯ ಮನೆ ಸಮೀಪವಿರುವ ಮೈದಾನಕ್ಕೆ ಕ್ರಿಕೆಟ್ ಆಡಲು ಬರುತ್ತಿದ್ದು, ಈ ಸಂದರ್ಭ ಮೂಗಿ ಬಾಲಕಿ ಮನೆ ಬಳಿ ಕುಳಿತು ಆಟ ವೀಕ್ಷಿಸುತ್ತಿದ್ದಳು. ಬಾಲಕಿಯ ಅಸಹಾಯಕತೆ ಅರಿತ ಆರೋಪಿ ಭಾನುವಾರ ಮಧ್ಯಾಹ್ನ ಆಕೆಯ ತಾಯಿ ಕೆಲಸಕ್ಕೆ ಹೋಗಿದ್ದ ಸಂದರ್ಭ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಹೆದರಿದ ಬಾಲಕಿ ಬೊಬ್ಬೆ ಹಾಕುತ್ತ ಓಡಿ ಹೋಗಿ ಪಕ್ಕದ ಮನೆಯವರಿಗೆ ಮಾಹಿತಿ ನೀಡಿದ್ದಾಳೆ. ವಿಷಯ ತಾಯಿಗೆ ಗೊತ್ತಾಗಿ ಬಾಲಕಿಯ ದೊಡ್ಡಪ್ಪನಿಗೆ ತಿಳಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವಾಗ ಸಲೂನ್‌ನಲ್ಲಿದ್ದ ಆರೋಪಿ ಓಡಲು ಯತ್ನಿಸಿದ್ದು, ಪೊಲೀಸರು ಬೆನ್ನಟ್ಟಿ ಸೆರೆ ಹಿಡಿದಿದ್ದಾರೆ.

ಘಟನೆ ನಡೆದ ಪರಿಸರದಲ್ಲೇ ಹಿಂದು ಜಾಗರಣಾ ವೇದಿಕೆ ಬೈಠಕ್ ಮುಗಿದಿತ್ತು. ಪ್ರಕರಣ ಬೆಳಕಿಗೆ ಬಂದಾಗ ಸಂಘಟನೆಯ ಕಾರ್ಯಕರ್ತರು ಆಕ್ರೋಶಗೊಂಡಿದ್ದರು.