ಜಿಲ್ಲೆ

ಅತ್ಯಾಚಾರ ಆರೋಪ, ಪೇದೆ ಬಂಧನ

Belagavi

ಬೆಳಗಾವಿ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಕೆಎಸ್‌ಆರ್‌ಪಿ ಪೊಲೀಸ್ ಪೇದೆಯನ್ನು ಶನಿವಾರ ಬಂಧಿಸಲಾಗಿದೆ. ಹುಕ್ಕೇರಿ ತಾಲೂಕಿನ ಮಾವನೂರ ಗ್ರಾಮದ ನಿವಾಸಿ, ಪೇದೆ ಇಮ್ರಾನ್‌ಖಾನ್ ಅಬ್ದುಲ್‌ಮುನಾಫ್ ಘೋರಿ(29) ಬಂಧಿತ ಆರೋಪಿ.

ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಮಹಿಳಾ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.