ಜಿಲ್ಲೆ

ಸೆ.21ರಂದು ನಗರದಲ್ಲಿ ವಾರ್ಷಿಕ ಮಹಾಸಭೆ: ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಯು.ಸಿ.ಶೇಖರ್ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 2023 -24ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯನ್ನು ಸೆ.21ರಂದು ಬೆಳಗ್ಗೆ 11.30ಕ್ಕೆ ನಗರದ ಸಂಘದ ಪ್ರಧಾನ ಕಚೇರಿ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಯು .ಸಿ .ಶೇಖರ್ ತಿಳಿಸಿದರು.

ಹಿಂದಿನ ವಾರ್ಷಿಕ ಮಹಾಸಭೆಯ ನಡಾವಳಿಯನ್ನು ಓದಿ ದಾಖಲಿಸಲಾಗುವುದು. 2023-24ನೇ ಸಾಲಿನ ಆಡಳಿತ ವರದಿಯನ್ನು ಪರಿಶೀಲಿಸಲಾಗುವುದು. ಲೆಕ್ಕ ಪರಿಶೋಧಕರಿಂದ ಪರಿಶೋಧಿಸಲ್ಪಟ್ಟ 2023-24ನೇ ಸಾಲಿನ ಜಮಾ ಖರ್ಚು ವ್ಯಾಪಾರ ತಕ್ತೆ, ಲಾಭ ನಷ್ಟ ತಕ್ತೆ ಮತ್ತು ಆಸ್ತಿ ಜವಾಬ್ದಾರಿ ತಕ್ತೆ ಹಾಗೂ ವರದಿ ಮತ್ತು ಈ ವರದಿಗೆ ಆಡಳಿತ ಮಂಡಳಿ ನೀಡಿರುವ ಸಮಜಾಯಿಸಿಯನ್ನು ಒಪ್ಪಿ ಅಂಗೀಕರಿಸುವ ಬಗ್ಗೆ ಚರ್ಚೆ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸದಸ್ಯರು ಸಭೆಗೆ ಬರುವಾಗ ಆಹ್ವಾನ ಪತ್ರಿಕೆ ಹಾಗೂ ಗುರುತಿನ ಚೀಟಿಯನ್ನು ತರಬೇಕು. ಗುರುತಿನ ಚೀಟಿ ಪಡೆಯದೆ ಇರುವ ಸದಸ್ಯರು ಪಾಸ್‌ಪೋರ್ಟ್ ಅಳತೆಯ ಮೂರು ಭಾವಚಿತ್ರ ನೀಡಿ ಪಡೆಯಬೇಕು ಎಂದರು.

ನಿರ್ದೇಶಕರಾದ ಸೋಮಶೇಖರ್, ಕೆ.ಸಿ.ರವೀಂದ್ರ, ಜಿ.ಎನ್.ಉದಯ್‌ಕುಮಾರ್, ಸಿ.ಕೆ.ಪಾಪಯ್ಯ, ಕೆ.ಟಿ.ಚಂದ್ರಶೇಖರ್, ಎಚ್.ಅಶೋಕ್ ಇದ್ದರು.