ರನ್ನ ಪ್ರತಿಷ್ಠಾನದ ನೂತನ ಸದಸ್ಯರನ್ನು ಮುಧೋಳದಲ್ಲಿ ಸಚಿವ ಆರ್.ಬಿ.ತಿಮ್ಮಾಪೂರ ಸನ್ಮಾನಿಸಿದರು. ಉದಯ ಕುಮಾರ ಸಾರವಾಡ, ಸದುಗೌಡ ಪಾಟೀಲ, ಶಿವಾನಂದ ಕತ್ತಿ, ಸಂಗಪ್ಪ ಇಮ್ಮನ್ನವರ, ಉದಯ ಡತಾರೆ, ಡಾ.ಸಂಗಮೇಶ ಕಲ್ಯಾಣಿ ಇದ್ದರು. 
ಜಿಲ್ಲೆ

ಫೆಬ್ರವರಿಯಲ್ಲಿ ರನ್ನ ವೈಭವ ಆಯೋಜನೆ

ಮುಧೋಳ: ಕಳೆದ ಕೆಲವು ವರ್ಷಗಳಿಂದ ನಿಂತು ಹೋಗಿದ್ದ ‘ರನ್ನ ವೈಭವ’ ಸಾಂಸ್ಕೃತಿಕ ಉತ್ಸವ 2025ರ ಫೆ. 22, 23 ಮತ್ತು 24ರಂದು ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಧೋಳದಲ್ಲಿ ಎರಡು ಡಿನ ಮತ್ತು ಬೆಳಗಲಿ ಒಂದು ದಿನ ಆಚರಿಸಲಾಗುವುದು. ಮೈಸೂರು ದಸರಾ ಮಾದರಿಯಂತೆ ಕಲೆ, ಸಂಸ್ಕೃತಿ ಹಾಗೂ ಮನರಂಜನೆ ಕಾರ್ಯಕ್ರಮ ಆಯೋಜಿಸಲು ಕ್ರಮವಹಿಸಲಾಗುವುದು ಎಂದರು.

ಈ ವೇಳೆ ರನ್ನ ಪ್ರತಿಷ್ಠಾನದ ನೂತನ ಸದಸ್ಯರನ್ನು ಸಚಿವರು ಶಾಲು ಹೊದಿಸಿ ಗೌರವಿಸಿದರು. ಕಾಂಗ್ರೆಸ್ ಪಕ್ಷದ ಮುಖಂಡರಾದ ಉದಯ ಕುಮಾರ ಸಾರವಾಡ, ಸದುಗೌಡ ಪಾಟೀಲ, ಶಿವಾನಂದ ಕತ್ತಿ, ಸಂಗಪ್ಪ ಇಮ್ಮನ್ನವರ, ಉದಯ ಡತಾರೆ, ಡಾ.ಸಂಗಮೇಶ ಕಲ್ಯಾಣಿ, ಪತ್ರಕರ್ತ ವಿಶ್ವನಾಥ ಮುನವಳ್ಳಿ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಉಪನಿರ್ದೇಶಕ ಕರ್ಣಕುಮಾರ ಇದ್ದರು.