ಕುಶಾಲನಗರ:
ಕುಶಾಲನಗರದ ಸರ್ಕಾರಿ ಎಂಜಿನಿಯರಿAಗ್ ಕಾಲೇಜಿನ ಸಿವಿಲ್ ವಿಭಾಗದ ಜಾಯ್ಸ್ ಲೆನಾ ಎಂಬ ವಿದ್ಯಾರ್ಥಿನಿ ಈ ಬಾರಿಯ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯದಲ್ಲಿಯೇ ಎರಡನೇ ಸ್ಥಾನ ಪಡೆವ ಮೂಲಕ ಮಾಡಿದ್ದು, ಈಕೆಯ ಅತ್ಯುತ್ತಮ ಸಾಧನೆಯನ್ನು ಪ್ರಶಂಸಿಸಿದ ಕೊಡಗು ಜಿಲ್ಲಾ ಬಡವರ ಬೆಳಕು ಚಾರಿಟೇಬಲ್ ಟ್ರಸ್ಟ್ ಹಾಗೂ ಸಾಮಿಲ್ ಅಸೋಸಿಯೇಷನ್ನಿನ ಪದಾಧಿಕಾರಿಗಳು ಗುರುವಾರ ಅವರ ಮನೆಗೆ ತೆರಳಿ ಸನ್ಮಾನ ಸಲ್ಲಿಸಿ ಅಭಿನಂದಿಸಿದರು.
ಈ ಸಂದರ್ಭ ಕೊಡಗು ಬಡವರ ಬೆಳಕು ಟ್ರಸ್ಟ್ ಅಧ್ಯಕ್ಷ ಎಂ.ಹೆಚ್. ಮೊಹಮ್ಮದ್ ಹಾಗೂ ಸಾಮಿಲ್ ಅಸೋಸಿಯೇಷನ್ ಉಪಾಧ್ಯಕ್ಷ ವಿಜಯರಾಜು, ಸಮಾಜ ಸೇವಕ ಕಿಂಗ್ಸ್ ವೇ ದಾವುದ್, ಸಿ.ಎಂ.ಅಜೀಜ್, ಲತೀಫ್, ಸಲಾಂ, ಎಂ.ಕೆ.ಹಮೀದ್, ವಿದ್ಯಾರ್ಥಿನಿ ಪೋಷಕರಾದ ಜೋಸೆಫ್ ವಂದನಾಥ್, ಜ್ಯೋಸ್ಟಿನ್ ಇದ್ದರು.