ಮಂಗಳೂರು: ರಂಜಿತ್ ಪಿ. ಭಟ್ ಅವರ ಕ್ರಿಪ್ಟೋಗ್ಯಾನ್: ಡಿಸೈನ್ ಓಫ್ ಜೆನೆರೇಟಿವ್ ಡೀಪ್ ಲನಿರ್ಂಗ್- ಬೇಸ್ಡ್ ಸೆಕ್ಯೂರ್ ಸ್ಟೆಗನೊಗ್ರಫಿ ಮಾಡೆಲ್ ಫಾರ್ ಇಮೇಜ್ ಎನ್ಕ್ರಿಪ್ಶನ್ ಎಂಬ ಶೀರ್ಷಿಕೆಯ ಸಂಶೋಧನಾ ಪ್ರಭಂದಕ್ಕೆ ಜೈನ್ (ಡೀಮ್ಡ್-ಟು-ಬಿ ವಿಶ್ವವಿದ್ಯಾಲಯ) ದಿಂದ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್‌ಡಿ) ಪದವಿಯನ್ನು ನೀಡಿದೆ. ಈ ಸಂಶೋಧನೆಯನ್ನು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ.ರಘು ಎನ್. ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು.
ಡಾ.ರಂಜಿತ್ ಪಿ.ಭಟ್ ಪ್ರಸ್ತುತ ನಿಟ್ಟೆ ಮಹಾಲಿಂಗ ಅಡ್ಯಂತಾಯ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ರೊಬೊಟಿಕ್ಸ್ ಅಂಡ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಇಂದುಮತಿ ಭಟ್ ಹಾಗೂ ದಿ.ಪ್ರಭಾಕರ್ ಭಟ್, ಎಣ್ಣೆಹೊಳೆ ಅವರ ಪುತ್ರರಾಗಿದ್ದು, ಇವರ ಸಾಧನೆಯು ಜನರೇಟಿವ್ ಎಐ ಮತ್ತು ಸೆಕ್ಯೂರ್ ಇಮೇಜ್ ಪ್ರೊಸೆಸಿಂಗ್ ಕ್ಷೇತ್ರದಲ್ಲಿ ಸಂಶೋಧನೆಯ ಪ್ರಗತಿಗೆ ಸಾಕ್ಷಿಯಾಗಿದೆ.