ಬೆಂಗಳೂರು: ‘ಕನ್ನಡತಿ’ ಖ್ಯಾತಿಯ ರಂಜನಿ ರಾಘವನ್ ಬರೀ ನಟಿಯಾಗಿಯಷ್ಟೇ ಅಲ್ಲ, ಬರಹಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದಾರೆ. ರಂಜನಿ ರಾಘವನ್ ತಮ್ಮ ಮದ್ವೆ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.
ಮದುವೆಯಾಗಲಿರುವ ಹುಡುಗ ಸಾಗರ್ ಭಾರಧ್ವಜ್ ಎಂದಿದ್ದಾರೆ. ಇಷ್ಟು ಮಾತ್ರವಲ್ಲ ತನ್ನ ಲೈಫ್ ಪಾಟ್ನರ್ ಜತೆಗಿನ ಫೋಟೋವನ್ನೂ ಹಂಚಿಕೊಂಡಿದ್ದಾರೆ. . ರಂಜಿನಿಯ ಮೇಲೆ ಕ್ರಶ್‌ಗೊಂಡಿದ್ದ ಹುಡುಗರಿಗೆ ಈ ಮೂಲಕ ಶಾಕ್ ಕೂಡ ನೀಡಿದ್ದಾರೆ.
ಸದ್ಯ ಈ ಫೋಟೋದಲ್ಲಿ ಇಬ್ಬರೂ ಟೋಪಿ ಧರಿಸಿದ್ದಾರೆ. ಕನ್ನಡಿಯ ಮುಂದೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಕನ್ನಡಿ ಫ್ರೇಮ್‌ನೊಳಗೆ ಇಬ್ಬರೂ ಸುಂದರವಾಗಿ ಕಾಣಿಸಿದ್ದಾರೆ. ಈ ಫೋಟೋಗೆ "ಸಾಗರ್ ಭಾರಧ್ವಜ್ ಲವ್ ರಂಜನಿ ರಾಘವನ್" ಎಂಬ ಕ್ಯಾಪ್ಷನ್ ಅನ್ನು ರಂಜನಿ ನೀಡಿದ್ದಾರೆ. ಈ ಫೋಟೋಗೆ ಕಂಗ್ರಾಜ್ಯುಲೇಷನ್ ಪ್ರವಾಹವೇ ಹರಿದುಬರುತ್ತಿದೆ.
ಪುಟ್ಟ ಗೌರಿ ಮದುವೆ ಸೀರಿಯಲ್ ನಟಿ ಸದ್ಯದಲ್ಲಿಯೇ ರಿಯಲ್ ಆಗಿ ಮದುವೆಯಾಗಲಿದ್ದಾರೆ ಎಂದು ಫ್ಯಾನ್ಸ್ ಕಾಮೆಂಟ್ ಮಾಡುತ್ತಾ ಈ ಮುದ್ದಾದ ಜೋಡಿಗೆ ಮೆಚ್ಚುಗೆ ಸೂಚಿಸಿದ್ದಾರೆ.