ಉಳ್ಳಾಲ: ಕ್ಷೇತ್ರದಲ್ಲಿರುವ ಇತಿಹಾಸ ಪ್ರಸಿದ್ಧ ಮತ್ತು ಪವಿತ್ರ ಕೆರೆಗಳನ್ನು ಅಭಿವೃದ್ಧಿಪಡಿಸಿ ಸೌಂದರ್ಯ ಕಾಪಾಡುವುದು ನಮ್ಮ ಜವಾಬ್ದಾರಿ, ಆ ನಿಟ್ಟಿನಲ್ಲಿ ಮುಡಾದಿಂದ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದ ಸನಿಹದಲ್ಲಿರುವ ರಾಣಿ ಅಬ್ಬಕ್ಕಳ ಜಳಕದ ಕೆರೆ ಎನ್ನಲಾದ ‘ರಾಣಿಕೆರೆ’ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಶ್ರೀ ಸೋಮನಾಥ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರನಾಥ ರೈ ಮಾತನಾಡಿ, ರಾಣಿ ಅಬ್ಬಕ್ಕ ಸ್ನಾನ ಮಾಡುತ್ತಿದ್ದ ಕೆರೆ ಇದಾಗಿದ್ದು, ಸೌಂದರ್ಯಗೊಳಿಸಬೇಕೆನ್ನುವ ಹಲವು ವರ್ಷಗಳ ನಮ್ಮ ಕನಸು ನನಸಾಗುತ್ತಿದೆ ಎಂದರು.
ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಸೋಮನಾಥ ಕ್ಷೇತ್ರದ ಪ್ರಧಾನ ಅರ್ಚಕ ಸೂರ್ಯನಾರಾಯಣ ಹೊಳ್ಳ, ಸದಸ್ಯರಾದ ದೀಪಕ್ ಪಿಲಾರ್, ಸುಹಾಸಿನಿ ಬಬ್ಬುಕಟ್ಟೆ, ಭಾಸ್ಕರ್ ಗಟ್ಟಿ, ಸುಂದರ್ ಗಾಂಧಿನಗರ, ಕಿಶೋರ್ ಉಚ್ಚಿಲ್, ಸದಾನಂದ ಬಂಗೇರ, ಸೋಮೇಶ್ವರ ಪುರಸಭೆಯ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ಸದಸ್ಯರಾದ ಪುರುಷೋತ್ತಮ ಶೆಟ್ಟಿ, ಅಬ್ದುಲ್ ಸಲಾಂ, ಜಯ ಪೂಜಾರಿ, ಸೋನಾ ಸುಭಾಷಿಣಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ತಾ.ಪಂ. ಮಾಜಿ ಸದಸ್ಯೆ ಸುರೇಖಾ ಚಂದ್ರಹಾಸ್, ಮುಡಾ ಆಯುಕ್ತೆ ನೂರ್ ಜಹಾನ್ ಝೊಹರಾ ಖಾನಂ ಇದ್ದರು.
ಅಧಿಕಾರ ಎನ್ನುವುದು ತಾತ್ಕಾಲಿಕ. ಅಧಿಕಾರ ಸಿಕ್ಕ ಸಂದರ್ಭ ಶಾಶ್ವತ ಕೆಲಸ ಮಾಡಿದಾಗ ಜನಸಾಮಾನ್ಯರ ಮನದಲ್ಲಿ ನಮ್ಮ ಹೆಸರು ಶಾಶ್ವತವಾಗಿ ಉಳಿಯುತ್ತದೆ. ಯಾತ್ರಾ ಮತ್ತು ಪವಿತ್ರ ಸ್ಥಳವಾಗಿರುವ ಶ್ರೀ ಸೋಮನಾಥ ದೇವಸ್ಥಾನದ ಆಸುಪಾಸಿನ ರಸ್ತೆ ಕಾಂಕ್ರೀಟ್ ಆಗಿದ್ದು, ಗದಾತೀರ್ಥ ಕೆರೆ ಅಭಿವೃದ್ಧಿಪಡಿಸಲಾಗಿದೆ. ಪವಿತ್ರ ಸ್ಥಳಗಳ ಪಾವಿತ್ರೃತೆ ಉಳಿಸಲು ಬೇಕಾದ ಎಲ್ಲ ವ್ಯವಸ್ಥೆ ಮಾಡಲಾಗುವುದು. ಯು.ಟಿ.ಖಾದರ್, ಸ್ಪೀಕರ್ https://www.vijayavani.net/raghaveshwara-bharathi-swamiji-visit-to-badiyadka-shree-bharathi-vidyapita https://www.vijayavani.net/honor-ro-achivers