ಜಿಲ್ಲೆ

ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್​ಗೆ 8.94 ಕೋಟಿ ರೂ. ಲಾಭ

ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್​ ನಿಯಮಿತವು 2024&25ನೇ ಆರ್ಥಿಕ ವರ್ಷದಲ್ಲಿ 8.94 ಕೋಟಿ ರೂ. ಲಾಭಗಳಿಸಿದ್ದು, ಷೇರುದಾರರಿಗೆ ಶೇ.15ರಷ್ಟು ಲಾಭಾಂಶ ನೀಡಲಾಗುವುದು ಎಂದು ಬ್ಯಾಂಕ್​ ಅಧ್ಯಕ್ಷೆ ಡಾ.ಪ್ರೀತಿ ದೊಡ್ಡವಾಡ ೂಷಿಸಿದರು.

ನೆಹರು ನಗರದ ಕನ್ನಡ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬ್ಯಾಂಕಿನ 29ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, 2024&25ರ ಠೇವಣಿ 402.78 ಕೋಟಿ ರೂ., ಸಾಲಗಳು 252.79 ಕೋಟಿ ರೂ. ಮತ್ತು ವರ್ಷದ ಲಾಭ 8.94 ಕೋಟಿ ರೂ. ಆಗಿದೆ ಎಂದು ಪ್ರಗತಿಯ ವರದಿ ಮಂಡಿಸಿದರು.

ಇದೇ ವೇಳೆ ಷೇರುದಾರರಿಗೆ ಶೇ. 15ರಷ್ಟು ಲಾಭಾಂಶ ೂಷಿಸಿದ ಅವರು, ಕಳೆದ 4 ವರ್ಷಗಳಿಂದ ಬ್ಯಾಂಕ್​ ತನ್ನ ಷೇರುದಾರರಿಗೆ ನಿರಂತರವಾಗಿ ಶೇ. 15ರಷ್ಟು ಲಾಭಾಂಶ ನೀಡುತ್ತಿದೆ. ಬ್ಯಾಂಕಿನ ವ್ಯವಹಾರವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಬ್ಯಾಂಕ್​ ಪ್ರಗತಿಯ ಪಥದಲ್ಲಿ ಸಾಗುತ್ತಿದೆ ಎಂದು ವಿವರಿಸಿದರು.

ಉಪಾಧ್ಯಕ್ಷೆ ರೂಪಾ ಜೆ. ಮುನವಳ್ಳಿ, ನಿರ್ದೇಶಕರುಗಳಾದ ಆಶಾ ಪಿ. ಕೋರೆ, ಸುವರ್ಣಲತಾ ಎನ್​. ಬನ್ಸೋಡೆ, ರಾಜೇಶ್ವರಿ ಎಂ. ಕವಟಗಿಮಠ, ಅರುಂಧತಿ ಎ. ಪಟ್ಟೇದ, ದೀಪಾ ಜೆ. ಮುನವಳ್ಳಿ, ಪೂಜಾ ಕೆ. ಸಾಧುನವರ, ಕೀರ್ತಿ ಜೆ. ಮೆಟಗುಡ್ಡ, ಸೀಮಾ ಪಿ. ಬಾಗೇವಾಡಿ, ಗಿರಿಜಾ ಎಂ. ಕೌಜಲಗಿ, ಡಾ. ಪುಷ್ಪಾ ವಿ. ಮಮದಾಪುರ, ಜ್ಯೋತಿ ಜಿ. ಮಠದ, ಬೀನಾ ಜಿ. ಆಚಾರ್​ ವೇದಿಕೆಯಲ್ಲಿದ್ದರು.

ವಾರ್ಷಿಕ ಮಹಾಸಭೆಯ ವಿಷಯಗಳನ್ನು ಸಭೆಯಲ್ಲಿ ಓದಲಾಯಿತು. ಬಳಿಕ ಅವುಗಳನ್ನು ಸರ್ವಾನುಮತದಿಂದ ಅನುಮೋದಿಸಲಾಯಿತು. ಇತ್ತೀಚೆಗೆ ನಿಧನರಾದ ಬ್ಯಾಂಕಿನ ಸ್ಥಾಪಕ ನಿರ್ದೇಶಕಿ ಶಾಂತಕ್ಕ ಕೆ. ಊಳ್ಳೂರು ಅವರಿಗೆ ಗೌರವ ಸಲ್ಲಿಸಲಾಯಿತು. ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಅತ್ಯುತ್ತಮ ಅಂಕ ಪಡೆದು ತೇರ್ಗಡೆಯಾದ ಬ್ಯಾಂಕ್​ ಸದಸ್ಯರ ಮಕ್ಕಳನ್ನು ಪುರಸ್ಕರಿಸಲಾಯಿತು.