ಜಿಲ್ಲೆ

ರಾಣಿ ಚನ್ನಮ್ಮ ಜಯಂತಿ ಅರ್ಥಪೂರ್ಣಗೊಳಿಸಿ

Kopala - Raveendra V K

ಕೊಪ್ಪಳ: ಕಿತ್ತೂರು ರಾಣಿ ಚನ್ನಮ್ಮ ಜಯಂತಿಯನ್ನು ಅ.23ರಂದು ಜಿಲ್ಲಾಡಳಿತದಿಂದ ಆಚರಿಸಲಾಗುವುದು. ಕಾರ್ಯಕ್ರಮ ಅರ್ಥಪೂರ್ಣವಾಗಿ ಆಚರಿಸಲು ಬೇಕಾದ ಅಗತ್ಯ ಸಿದ್ಧತೆ ಮಾಡಿಕೊಳ್ಳಿ ಎಂದು ಎಡಿಸಿ ಸಿದ್ರಾಮೇಶ್ವರ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಡಿಸಿ ಕಚೇರಿ ಕೆಸ್ವಾನ್​ ಹಾಲ್​ನಲ್ಲಿ ಹಮ್ಮಿಕೊಂಡಿದ್ದ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಶಿಷ್ಠಾಚಾರದಂತೆ ಆಮಂತ್ರಣ ಪತ್ರಿಕೆ ಮುದ್ರಿಸಿ. ಗಣ್ಯರನ್ನು ಆಹ್ವಾನಿಸಿ. ವಿವಿಧ ಇಲಾಖೆ ಅಧಿಕಾರಿಗಳು ನಿಮಗೆ ವಹಿಸಿದ ಜವಾಬ್ದಾರಿ ಸರಿಯಾಗಿ ನಿಭಾಯಿಸಿ. ಸಮನ್ವಯತೆಯಿಂದ ಕೆಲಸ ಮಾಡಿ. ನಗರದ ಪ್ರಮುಖ ಬೀದಿಗಳನ್ನು ಸ್ವಚ್ಛಗೊಳಿಸಿ. ವಿದ್ಯುತ್​ ದೀಪ ಅಳವಡಿಸಿ. ಕುಡಿವ ನೀರು ವ್ಯವಸ್ಥೆ ಮಾಡಿ. ಮೆರವಣಿಗೆ ಸಾಗುವ ಮಾರ್ಗ ಶುಚಿಗೊಳಿಸಿ. ಪ್ರಮುಖ ವೃತ್ತಗಳಿಗೆ ದೀಪಾಲಂಕಾರ ಮಾಡುವಂತೆ ನಿರ್ದೇಶಿಸಿದರು.

ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್​ ಮರಬನಹಳ್ಳಿ ಮಾತನಾಡಿ, ಅ.23ರಂದು ಬೆಳಗ್ಗೆ 9ಕ್ಕೆ ಕಿತ್ತೂರು ರಾಣಿ ಚನ್ನಮ್ಮ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಕಿತ್ತೂರು ಚನ್ನಮ್ಮ ವೃತ್ತದಿಂದ ಆರಂಭವಾಗಿ ಅಂಬೇಡ್ಕರ್​ ಸರ್ಕಲ್​, ಶಾರದಾ ಟಾಕೀಸ್​, ಗಡಿಯಾರ ಕಂಬ ಮಾರ್ಗವಾಗಿ ಸಾಹಿತ್ಯಭವನವರೆಗೆ ಸಾಗುವುದು. ಬೆಳಗ್ಗೆ 11ಕ್ಕೆ ಸಾಹಿತ್ಯ ಭವನದಲ್ಲಿ ವೇದಿಕೆ ಕಾರ್ಯಕ್ರಮ ಇರಲಿದೆ. ಗಣ್ಯರು, ಪ್ರತಿಭಾವಂತ ಮಕ್ಕಳಿಗೆ ಸನ್ಮಾನ ಇರಲಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧೀಕ್ಷಕಿ ನಾಗವ್ವ ಎಚ್​., ತಾಲೂಕು ಅಭಿವೃದ್ಧಿ ಅಧಿಕಾರಿ ಸುರೇಶ ಬಿ.ಕೆ., ಜಿಲ್ಲಾ ಆಯುಷ್​ ಇಲಾಖೆ ಸಹಾಯಕ ಆಡಳಿತಾಧಿಕಾರಿ ಸೀತಾ, ಕೆಕೆಆರ್​ಟಿಸಿ ಅಧಿಕಾರಿ ಸತ್ಯನಾರಾಯಣ, ಪ್ರವಾಸೋದ್ಯಮ ಇಲಾಖೆ ಎಡಿ ನಾಗರಾಜ ಡಿ., ರೇಷ್ಮೇ ಇಲಾಖೆಯ ಅಕ್ಕಮಹಾದೇವಿ, ಸುಧಾಕರ ಮಾನೆ, ಸಮುದಾಯ ಪ್ರಮುಖರಾದ ಕರಿಯಪ್ಪ ಮೇಟಿ, ಗಿರಿಜಾ ಪೊಲೀಸ್​ ಪಾಟೀಲ್​, ಸುಮಂಗಲಾ ಹಂಚಿನಾಳ, ಸುಜಾತಾ ಪಟ್ಟಣಶೆಟ್ಟಿ, ಮಹಾಂತೇಶ ಮಲ್ಲನಗೌಡರ, ಎಸ್​.ಟಿ ಹಂಚಿನಾಳ, ರಾಣಿ ಸೊರಟೂರ ಇತರರಿದ್ದರು.